lantern ಲ್ಯಾಂಟರ್ನ್‍
ನಾಮವಾಚಕ
  1. ಲಾಂದ್ರ; ಲಾಟೀನು:
    1. ಕಂದೀಲು; ಚಿಮಣಿ ದೀಪ: ಗಾಳಿ ತಡೆಯುವಂತೆ ಮುಖ್ಯವಾಗಿ ಗಾಜಿನ ಬುರುಡೆ ಯಾ ಚಿಮಣಿ ಮುಚ್ಚಿದ ದೀಪ.
    2. ವಿದ್ಯುತ್‍ ಮೊದಲಾದವುಗಳ ಅದೇ ಬಗೆಯ ದೀಪ.
  2. ಚಿಮಣಿ; ದೀಪದ ಸುತ್ತ ಹಾಕಿರುವ ಗಾಜು ಮೊದಲಾದವುಗಳ ಪಾರದರ್ಶಕ ಕೋಶ, ಬುರುಡೆ.
  3. ಬೆಳಕು ಮಾಳಿಗೆ; ಬೆಳಕು ಗೂಡು; ಕೊಠಡಿಯ ಮಾಳಿಗೆಯಲ್ಲಿ ಯಾ ಗುಮ್ಮಟದ ಮೇಲ್ಭಾಗ ಮತ್ತು ಪಕ್ಕಗಳಲ್ಲಿ ಗಾಜು ಹಲಗೆಗಳ ಮೂಲಕ ಒಳಕ್ಕೆ ಬೆಳಕು ಬೀಳುವಂತೆ ನಿರ್ಮಿಸಿರುವ ಬೆಳಕಿನ ಗೂಡು.
  4. ಗಾಳಿಗೂಡು; ಗಾಳಿ, ಬೆಳಕು, ಮೊದಲಾದವುಗಳಿಗಾಗಿ ನಿರ್ಮಿಸುವ ಇಂಥದೇ ರಚನೆ.
  5. (ಕಡಲಿನ) ದೀಪಸ್ತಂಭದ ಯಾ ದೀಪಗೃಹದ ಬೆಳಕಿನ ಕೋಣೆ.
  6. ಬೆಳಕು ಮೂತಿ; ಲಾಂದ್ರದ ಕೀಟವೆಂಬ ಜಾತಿಯ ಕೀಟಗಳ ಪ್ರಕಾಶಮಯವಾದ ಉದ್ದನೆಯ ಮೂತಿ.
  7. = magic lantern.
ಪದಗುಚ್ಛ

parish lantern (ಬ್ರಿಟಿಷ್‍ ಪ್ರಯೋಗ) ಚಂದ್ರ.