languorous ಲ್ಯಾಂಗರಸ್‍
ಗುಣವಾಚಕ
  1. ನಿಶ್ಯಕ್ತಿಯ; ನಿತ್ರಾಣದ; ದೌರ್ಬಲ್ಯದ; ಬವಳಿಯ; ಬಲಹೀನತೆಯ; ಕ್ಷೀಣಸ್ಥಿತಿಯ.
  2. ದಣಿವಿನ; ಬಳಲಿಕೆಯ; ಸುಸ್ತಿನ; ಆಯಾಸದ.
  3. ಆಲಸ್ಯದ; ಜಡತೆಯ; ಲವಲವಿಕೆ, ಚಟುವಟಿಕೆ, ಚುರುಕು, ಪಟುತ್ವ – ಇಲ್ಲದ.
  4. ನಿರಾಸಕ್ತಿಯ; ನಿರುತ್ಸಾಹದ; ಮಾಂದ್ಯದ; ಕುಗ್ಗಿಹೋದ ಸ್ಥಿತಿಯ.
  5. (ಮನಸ್ಸು) ಮೆತ್ತಗಾಗಿ ಹೋಗಿರುವ; ಸ್ಥೈರ್ಯ ಕುಂದಿದ.
  6. (ಗಾಳಿ, ಆಕಾಶ, ಮೊದಲಾದವುಗಳ ವಿಷಯದಲ್ಲಿ) ಹೃದಯ ಭಾರವೆನಿಸುವಂತೆ ಮಾಡುವ – ನಿಶ್ಚಲತೆಯ, ನೀರವತೆಯ, ಮೌನದ.