languish ಲ್ಯಾಂಗ್ವಿಷ್‍
ಅಕರ್ಮಕ ಕ್ರಿಯಾಪದ
  1. ಕ್ಷೀಣಿಸು; ಕ್ಷಯಿಸು; ಸೊರಗು; ನಿತ್ರಾಣಗೊಳ್ಳು; ಶಕ್ತಿಗುಂದಿರು; ನಿರ್ವೀರ್ಯವಾಗು ಯಾ ನಿರ್ವೀರ್ಯವಾಗಿರು.
  2. ದುಃಸ್ಥಿತಿಯಲ್ಲಿರು; ದುಃಸ್ಥಿತಿಗೆ ಒಳಗಾಗಿರು; ದುರ್ಬಲಗೊಳಿಸುವ ಯಾ ನಿರುತ್ಸಾಹ ಗೊಳಿಸುವ ಸ್ಥಿತಿಯಲ್ಲಿ ಬದುಕು; ಬಲಗುಂದಿಸುವ ಯಾ ಮನಕುಗ್ಗಿಸುವ, ಸನ್ನಿವೇಶದಲ್ಲಿ, ಪರಿಸ್ಥಿತಿಯಲ್ಲಿ – ಜೀವಿಸು, ವಾಸಿಸು: languished in poverty for years ಅನೇಕ ವರ್ಷಗಳು ಬಡತನಕ್ಕೆ ಸಿಕ್ಕಿಬಿದ್ದಿದ್ದ. languishing under foreign domination ವಿದೇಶೀ ಪ್ರಭುತ್ವದ ಅಡಿಯಲ್ಲಿ ಸೊರಗುತ್ತಾ.
  3. ಕುಸಿ; ಕುಗ್ಗಿ ಹೋಗು.
  4. ಕೊರಗು; ಹಂಬಲಿಸು; ಹಾತೊರೆ: languish for love ಪ್ರೇಮಕ್ಕಾಗಿ ಹಾತೊರೆ. languish for sympathy ಸಹಾನುಭೂತಿಗಾಗಿ ಹಂಬಲಿಸು.
  5. ಜೋಲು ಮೋರೆ ಹಾಕು; ಸಪ್ಪೆ ಮುಖ ಹಾಕಿಕೊ.
  6. ಮರುಕ ನಟಿಸು: ಅತಿ ಭಾವುಕತೆಯ, ದಯಾರ್ದ್ರತೆಯ ಸೋಗು ಹಾಕು.
ಪದಗುಚ್ಛ

languish under (ಮುಖ್ಯವಾಗಿ ಚಿಂತಾಕುಲತೆ, ಸೆರೆವಾಸ, ಮೊದಲಾದವುಗಳಿಂದ) ನರಳು.