language ಲ್ಯಾಂಗ್ವಿಜ್‍
ನಾಮವಾಚಕ
  1. ಭಾಷೆ; ಅಂಗೀಕೃತ ರೀತಿಯಲ್ಲಿ ಪದಗಳನ್ನು ಬಳಸುವ, ಆಡುವ ಯಾ ಬರೆಯುವ ರೂಪದ, ಮಾನವ ಸಂವಹನದ ವಿಧಾನ; ಅರ್ಥನೀಡುವ, ವಾಗಿಂದ್ರಿಯಜನ್ಯನಾದಗಳ ಒಂದು ವ್ಯವಸ್ಥೆ.
  2. (ಒಂದು ದೇಶ, ಜನಾಂಗ, ಮೊದಲಾದವುಗಳ) ಭಾಷೆ; ನುಡಿ: speaks several languages ಹಲವಾರು ಭಾಷೆಗಳನ್ನು ಆಡುತ್ತಾನೆ.
  3. ವಾಕ್‍ಶಕ್ತಿ; ಮಾತನಾಡುವ ಶಕ್ತಿ.
  4. ಭಾಷೆ:
    1. (ವ್ಯಕ್ತಿಯ) ಭಾಷಾಶೈಲಿ; ಮಾತಿನ ವರಸೆ; ಅಭಿವ್ಯಕ್ತಿಯ ಶೈಲಿ; ಭಾಷೆಯ ಯಾ ಮಾತಿನ ಬಳಕೆ, ಪ್ರಯೋಗ: his language was poetic ಅವನ ಭಾಷೆ ಕಾವ್ಯಮಯವಾಗಿತ್ತು. hasn’t the language to express it ಅದನ್ನು ವ್ಯಕ್ತಪಡಿಸಲು ಅವನಲ್ಲಿ ಮಾತಿಲ್ಲ.
    2. (ಕಂಪ್ಯೂಟರ್‍) ‘ಪ್ರೋಗ್ರಾಂ’ಗಳನ್ನು ಬರೆಯಲು ಬೇಕಾದ ಸಂಕೇತಗಳ ಮತ್ತು ನಿಯಮಗಳ ವ್ಯವಸ್ಥೆ.
    3. (ಯಾವುದೇ) ಅಭಿವ್ಯಕ್ತಿ ವಿಧಾನ: sign language ಸಂಜ್ಞಾಭಾಷೆ.
  5. ಸಾಹಿತ್ಯ ಶೈಲಿ; ಸಾಹಿತ್ಯಕ ಪದಪ್ರಯೋಗ.
  6. (ಒಂದು ವೃತ್ತಿ, ವರ್ಗ, ಮೊದಲಾದವುಗಳ) ವಿಶಿಷ್ಟಭಾಷೆ; ಪರಿಭಾಷೆ.
  7. ಪದಗಳು ಮತ್ತು ಪದಪ್ರಯೋಗ; ಶಬ್ದಗಳು ಮತ್ತು ಅವುಗಳ ಬಳಕೆ.
  8. ಕೆಟ್ಟಭಾಷೆ; ದುರ್ಭಾಷೆ; ಆಣೆ, ಬೈಗುಳ, ನಿಂದೆ, ಶಾಪ, ಮೊದಲಾದವು ತುಂಬಿದ ಮಾತು: didn’t like his language ಅವನ ಕೆಟ್ಟ ಭಾಷೆ ಹಿಡಿಸಲಿಲ್ಲ.
ಪದಗುಚ್ಛ
  1. bad language = language(8).
  2. finger language ಬೆರಳು ಭಾಷೆ; ಬೆರಳು ನುಡಿ; ಅಂಗುಲಿಭಾಷೆ; ಬೆರಳುಗಳಿಂದ ವಾಡಿಕೆಯಲ್ಲಿರುವ ಸನ್ನೆಗಳನ್ನು ಮಾಡಿ ವ್ಯವಹರಿಸುವುದು; ಬೆರಳು ಸನ್ನೆಯ ಭಾಷೆ.
  3. language of flowers ಹೂಭಾಷೆ; ಹೂನುಡಿ; ಪುಷ್ಪಭಾಷೆ; ಬಗೆಬಗೆಯ ಹೂವುಗಳಿಗೆ ಬೇರೆಬೇರೆ ಸಂಕೇತಾರ್ಥಗಳನ್ನು ಕೊಟ್ಟು ಅವುಗಳ ಮೂಲಕ ವ್ಯವಹರಿಸುವ, ಮಾತನಾಡುವ ವಿಧಾನ.
  4. strong language ಕಟು ನುಡಿ; ಉಗ್ರಭಾಷೆ; ಭಾವಾತಿರೇಕವನ್ನು ತೋರಿಸುವ ಭಾಷೆ.
ನುಡಿಗಟ್ಟು

speak the same language ಒಂದೇ ದೃಷ್ಟಿ, ಅಭಿಪ್ರಾಯ, ಅಭಿವ್ಯಕ್ತಿ ಶೈಲಿ, ಮೊದಲಾದವನ್ನು ಹೊಂದಿರು.