landfall ಲ್ಯಾನ್ಡ್‍ಹಾಲ್‍
ನಾಮವಾಚಕ
  1. (ನೌಕಾಯಾನ)
    1. ಕರೆಗಾಣ್ಕೆ; ನೆಲಗಾಣ್ಕೆ; ತೀರದರ್ಶನ; ಭೂದರ್ಶನ; ಕಡಲ ಪ್ರಯಾಣದಲ್ಲಿ ಯಾ ವಾಯುಯಾನದಲ್ಲಿ ಮುಖ್ಯವಾಗಿ ಮೊದಲನೆಯ ಸಲ ನೆಲ ಕಾಣುವುದು.
    2. ಭೂಸಮೀಪನ; ತೀರ ಸಮೀಪನ; ಹಡಗು ದಡವನ್ನು ಮುಟ್ಟುವುದಕ್ಕಿಂತ, ವಿಮಾನ ನೆಲ ಮುಟ್ಟುವುದಕ್ಕಿಂತ ಮುಂಚಿನ ಹಂತ.
  2. ಭೂ ಕುಸಿತ; ನೆಲಕುಸಿತ.
ಪದಗುಚ್ಛ
  1. bad landfall ತಪ್ಪು, ತಪ್ಪೆಣಿಕೆ – ಭೂಸ್ವರ್ಶ; ಲೆಕ್ಕಾಚಾರಕ್ಕೆ ವ್ಯತಿರಿಕ್ತವಾಗಿ ಯಾ ಎಣಿಕೆಗೆ ವಿರುದ್ಧವಾಗಿ ಕರೆ ಯಾ ಭೂಭಾಗ ಮುಟ್ಟುವುದು.
  2. good landfall (ನೌಕಾಯಾನ) ಸರಿಯಾದ ಭೂ ಸ್ಪರ್ಶ; ಎಣಿಸಿದಂತೆ ತೀರ ತಲುಪುವುದು; ಲೆಕ್ಕಾಚಾರದಂತೆ ಭೂಭಾಗ ಯಾ ಕರೆ ಮುಟ್ಟುವುದು.