lambent ಲ್ಯಾಂಬನ್ಟ್‍
ಗುಣವಾಚಕ
  1. (ಉರಿಯ ವಿಷಯದಲ್ಲಿ) ಸುಡದೆ ಸುಳಿದಾಡುವ; ಮೇಲ್ಮೈಯನ್ನು ಸುಡದೆ ಹಗುರವಾಗಿ (ಒಂದರ ಮೇಲೆ) ಆಡುತ್ತಿರುವ.
  2. (ಬೆಳಕಿನ ವಿಷಯದಲ್ಲಿ) ಮಿದುಬೆಳಕಿನ; ಸೌಮ್ಯ ಪ್ರಕಾಶದ; ತೀಕ್ಷ್ಣವಲ್ಲದ; ಮೃದುವಾದ.
  3. (ಕಣ್ಣು, ಆಕಾಶ, ಮೊದಲಾದವುಗಳ ವಿಷಯದಲ್ಲಿ) ಮಂದ ಪ್ರಕಾಶದ; ಮೃದುಕಾಂತಿಯ; ಸೌಮ್ಯ ಪ್ರಕಾಶದಿಂದ ಕೂಡಿದ.
  4. (ಬುದ್ಧಿ, ಚಮತ್ಕಾರ, ಮೊದಲಾದ) ನಯಸೊಬಗಿನ.