See also 2lamb
1lamb ಲ್ಯಾಮ್‍
ನಾಮವಾಚಕ
  1. ಕುರಿಮರಿ.
  2. (ಆಹಾರವಾಗಿ ಉಪಯೋಗಿಸುವ) ಕುರಿಮರಿ ಮಾಂಸ.
  3. ಕಿರಿಯ ಕ್ರಸ್ತ; ಎಳೆ ವಯಸ್ಸಿನ ಕ್ರೈಸ್ತ; ಕ್ರೈಸ್ತ ಸಮುದಾಯದ, ಶಿಷ್ಯ ವರ್ಗದ, ಕಿರಿಯ ಸದಸ್ಯ.
  4. ಪರಮ ಸಾಧು; ಸೌಮ್ಯ ಯಾ ಶಾಂತ ವ್ಯಕ್ತಿ.
  5. ಮುಗ್ಧ; ಕೃತ್ರಿಮವರಿಯದವನು; ಏನೂ ತಿಳಿಯದವನು.
  6. ಕೈಲಾಗದವನು; ಅಶಕ್ತ; ದುರ್ಬಲ.
  7. (ವ್ಯಾಪಾರ ಮೊದಲಾದವುಗಳಲ್ಲಿ ಸುಲಭವಾಗಿ) ಟೋಪಿ ಬೀಳುವವನು; ಮೋಸ ಹೋಗುವವನು; ಮೋಸಕ್ಕೆ ಪಕ್ಕಾಗುವವನು.
  8. (ಒಬ್ಬನ) ಪ್ರೀತಿಪಾತ್ರ; ಮುದ್ದು: you are a lamb but it is not fair ನೀನು ನನ್ನ ಮುದ್ದು ಚಿನ್ನ ಹೌದು, ಆದರೆ ನೀನು ಮಾಡಿರುವುದು ಸರಿಯಲ್ಲ.
ಪದಗುಚ್ಛ

The Lamb (of God) ಏಸುಕ್ರಿಸ್ತ.

ನುಡಿಗಟ್ಟು
  1. as well be hanged (or hung) for a sheep as for a lamb ಹೇಗೂ ಪಾಪದಲ್ಲಿ ತೊಡಗಿದ್ದೀಯೆ, ಅದನ್ನು ಧೈರ್ಯವಾಗಿ ಕೊನೆಮುಟ್ಟಿಸು; ಪಾಪಕ್ಕಂತೂ ಕೈಹಾಕಿದ್ದೀಯೆ, ಅದನ್ನು ಮುಗಿಸಿಯೇ ಬಿಡು, ಪೂರ್ತಿ ಮಾಡಿಯೇ ಬಿಡು.
  2. fox in lamb’s skin = ನುಡಿಗಟ್ಟು \((4)\).
  3. like a lamb (ಕುರಿಮರಿಯಂತೆ) ವಿಧೇಯನಾಗಿ; ಸಾಧುವಾಗಿ; ಸ್ವಲ್ಪವೂ ವಿರೋಧಿಸದೆ; ಎದುರಾಡದೆ; ಎದುರುಬೀಳದೆ; ಪ್ರತಿಭಟಿಸದೆ; ತಲೆ ಬಗ್ಗಿಸಿಕೊಂಡು; ಉಸಿರೆತ್ತದೆ; ಬಾಯಿಮುಚ್ಚಿಕೊಂಡು.
  4. wolf in lamb’s skin ಗೋಮುಖವ್ಯಾಘ್ರ; ಆಷಾಢಭೂತಿ; ಕುರಿವೇಷದ ತೋಳ.
See also 1lamb
2lamb ಲ್ಯಾಮ್‍
ಸಕರ್ಮಕ ಕ್ರಿಯಾಪದ
  1. (ಗಬ್ಬದ ಕುರಿಗಳನ್ನು) ಆರೈಸು; ಆರೈಕೆ ಮಾಡು: lamb ewes ಗಬ್ಬವಾದ ಕುರಿಗಳನ್ನು ನೋಡಿಕೊ, ಆರೈಸು, ಆರೈಕೆ ಮಾಡು.
  2. (ಕರ್ಮಣಿಪ್ರಯೋಗದಲ್ಲಿ) (ಕುರಿಗಳ ವಿಷಯದಲ್ಲಿ) ಈಯಲ್ಪಡು.
ಅಕರ್ಮಕ ಕ್ರಿಯಾಪದ

ಕುರಿಮರಿ ಹಾಕು.