lagoon ಲಗೂನ್‍
ನಾಮವಾಚಕ
  1. ಲಗೂನು; ತಗ್ಗಾದ ಮರಳು ದಂಡೆ, ಹವಳದ ದಿಬ್ಬ, ಮೊದಲಾದವುಗಳ ಮೂಲಕ ಸಮುದ್ರದಿಂದ ಬೇರ್ಪಡಿಸಿದ ಉಪ್ಪು ನೀರಿನ ಹರವು.
  2. ಆವೃತ ಜಲಭಾಗ; ಸಮುದ್ರದಲ್ಲಿ ಹವಳದ ದಿಬ್ಬ ಸುತ್ತುವರಿದಿರುವ ಜಲಭಾಗ; ಹವಳ ದ್ವೀಪದ ನಡುವೆ ಅಲ್ಲಲ್ಲಿ ಇರುವ ಜಲಭಾಗ.
  3. (ಅಮೆರಿಕನ್‍ ಪ್ರಯೋಗ, ಆಸ್ಟ್ರೇಲಿಯ, ನ್ಯೂಸಿಲೆಂಡ್‍) ದೊಡ್ಡ ಸರೋವರದ ಯಾ ನದಿಯ ಸಮೀಪವಿರುವ, ಚಿಕ್ಕದಾದ ಸಿಹಿನೀರು ಸರೋವರ.
  4. ಕೃತಕ ಕೊಳ; ಊರಿನ ರೊಚ್ಚು, ಕಾರ್ಖಾನೆ ರೊಚ್ಚು, ಮೊದಲಾದವುಗಳನ್ನು ಆಕ್ಸಿಡೀಕರಣದಿಂದ ಸಂಸ್ಕರಿಸಿದ, ಹೆಚ್ಚು ಆಳವಿಲ್ಲದ ಕೃತಕ ಕೊಳ.