See also 2lag  3lag  4lag  5lag  6lag
1lag ಲ್ಯಾಗ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ lagged, ವರ್ತಮಾನ ಕೃದಂತ lagging).
  1. ಬಹು ನಿಧಾನವಾಗಿ ಹೋಗು; ಜೊತೆಗೆ ಹೆಜ್ಜೆ ಹಾಕದಿರು; ಹಿಂದೆ ಬೀಳು.
  2. (ಅಮೆರಿಕನ್‍ ಪ್ರಯೋಗ) (ಬಿಲಿಯರ್ಡ್ಸ್‍) ಯಾವ ಆಟಗಾರ ಆಟ ಆರಂಭಿಸಬೇಕೆಂಬುದನ್ನು ತೀರ್ಮಾನಿಸಲು, ಪ್ರಾರಂಭಿಕ ಹೊಡೆತಗಳನ್ನು ಹೊಡೆ.
See also 1lag  3lag  4lag  5lag  6lag
2lag ಲ್ಯಾಗ್‍
ನಾಮವಾಚಕ
  1. ತಡ; ವಿಳಂಬ.
  2. ನಿಧಾನಗತಿ; ಮಂದಗತಿ.
  3. (ಭೌತವಿಜ್ಞಾನ)
    1. ವಿಳಂಬ; ಚಲನೆಯಲ್ಲಾಗಲಿ, ಘಟನೆ ನಡೆಯುವುದರಲ್ಲಿ ಆಗಲಿ ಆಗುವ ನಿಧಾನ, ವಿಳಂಬ.
    2. ವಿಳಂಬ(ದ ಪ್ರಮಾಣ).
ಪದಗುಚ್ಛ

lag of tide ಭರತದ ವಿಳಂಬ; ವೀಚೀ ವಿಳಂಬ; ನಿತ್ಯ ಕಾಣಿಸಿಕೊಳ್ಳುವ ಭರತದ ಸರಾಸರಿ ಕಾಲಕ್ಕಿಂತ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಲ್ಲಿ ಅದು ಎಷ್ಟು ತಡವಾಗುವುದೋ ಆ ಅವಧಿ.

See also 1lag  2lag  4lag  5lag  6lag
3lag ಲ್ಯಾಗ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ lagged, ವರ್ತಮಾನ ಕೃದಂತ lagging).

ಉಷ್ಣರೋಧಕವನ್ನು ಹೊದಿಸು.

See also 1lag  2lag  3lag  5lag  6lag
4lag ಲ್ಯಾಗ್‍
ನಾಮವಾಚಕ

(ಕುದಿಪಾತ್ರೆ ಮೊದಲಾದವಕ್ಕೆ ಹೊದಿಸಿರುವ) ಉಷ್ಣರೋಧಕ ಹೊದಿಕೆ ಯಾ ಅದರ ಒಂದು ತುಂಡು.

See also 1lag  2lag  3lag  4lag  6lag
5lag ಲ್ಯಾಗ್‍
ನಾಮವಾಚಕ

(ಅಶಿಷ್ಟ) ಕೈದಿ; ಬಂದಿ; ಸೆರೆಯಾಳು: old lag ಹಳೆಯ ಕೈದಿ.

See also 1lag  2lag  3lag  4lag  5lag
6lag ಲ್ಯಾಗ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ lagged, ವರ್ತಮಾನ ಕೃದಂತ lagging).

(ಅಶಿಷ್ಟ)

  1. ಜೈಲಿಗೆ ಕಳುಹಿಸು.
  2. ದಸ್ತಗಿರಿ ಮಾಡು; ಕೈದು ಮಾಡು; ಬಂಧಿಸು.