lady ಲೇಡಿ
ನಾಮವಾಚಕ
(ಬಹುವಚನ ladies).
  1. ಮಹಿಳೆ; ಕುಲೀನೆ; ಆರ್ಯೆ; ಆಢ್ಯೆ; ಲೇಡಿ; ಸಮಾಜದ ಉಚ್ಚವರ್ಗದ ಯಾ ಮೇಲ್ತರಗತಿಯ ಹೆಂಗಸು.
  2. (Lady). ಶ್ರೀಮಂತೆ; ಶ್ರೀಮಂತ ಕುಟುಂಬದ ಹೆಂಗಸರು, ನೈಟ್‍ ಪದವಿ ಪಡೆದವರ ಹೆಂಡತಿಯರು, ಅವರ ವಿಧವೆಯರು, ಮೊದಲಾದವರ ಹೆಸರಿನ ಹಿಂದೆ ಸೇರಿಸುವ ಗೌರವ ಬಿರುದು: Lady Mayoress (ಲಾರ್ಡ್‍) ಮೇಯರನ ಹೆಂಡತಿ.
  3. (ಕೆಲವೊಮ್ಮೆ ವಿಶೇಷಣವಾಗಿ) ಹೆಣ್ಣು; ಸ್ತ್ರೀ: lady clerk ಗುಮಾಸ್ತಳು. lady doctor ವೈದ್ಯೆ. lady president ಅಧ್ಯಕ್ಷೆ. lady dog ಹೆಣ್ಣು ನಾಯಿ. ask that lady over there ಅಲ್ಲಿರುವ ಹೆಂಗಸನ್ನು ಕೇಳು.
  4. (ಆಡುಮಾತು) ಹೆಂಡತಿ; ಪತ್ನಿ: your good lady ನಿನ್ನ ಹೆಂಡತಿ.
  5. (ಆಡುಮಾತು) ನಲ್ಲೆ; ಪ್ರಿಯೆ; ಪ್ರೇಯಸಿ; ಪ್ರಣಯಿನಿ; ಪುರುಷನ ಪ್ರೀತಿಪಾತ್ರಳು.
  6. ಒಡತಿ; ಯಜಮಾನಿ; ಗೃಹಿಣಿ; ಯಾಜಮಾನ್ಯ ಮಾಡುವವಳು ಯಾ ಹೊಂದಿರುವವಳು: lady of the house ಮನೆಯ ಯಜಮಾನಿ; ಯಜಮಾನಿತಿ; ಮನೆಯೊಡತಿ; ಮನೆಯ ಪಾರುಪತ್ಯ ನೋಡಿಕೊಳ್ಳುವವಳು.
  7. (ಬಹುವಚನದಲ್ಲಿ) (ಸಂಬೋಧನ ರೂಪದಲ್ಲಿ) ಮಹಿಳೆಯರು; ಪ್ರೇಕ್ಷಕರಲ್ಲಿ ಸ್ತ್ರೀ ವರ್ಗ: ladies and gentlemen (ಸ್ತ್ರೀ ಪುರುಷರು ಸೇರಿರುವ ಸಭೆಯನ್ನು ಸಂಬೋಧಿಸುವಾಗ) ಮಹಿಳೆಯರೇ, ಮಹನೀಯರೇ.
  8. (ಚರಿತ್ರೆ) ಪ್ರಣಯಿನಿ; ಒಬ್ಬ ಗಂಡಸಿನ, ಮುಖ್ಯವಾಗಿ ‘ನೈಟ್‍’ನ, ಪ್ರೀತಿ ನಿಷ್ಠೆಗೆ ಪಾತ್ರಳಾದ ಹೆಂಗಸು.
  9. (ಏಕವಚನದಲ್ಲಿ ಕಾವ್ಯಪ್ರಯೋಗ ಯಾ ಪಾಮರ ಪ್ರಯೋಗ, ಸಾಮಾನ್ಯವಾಗಿ ಬಹುವಚನದಲ್ಲಿ ಸಂಬೋಧನ ರೂಪ) ಮಹಿಳೆಯರು.
  10. ಮಹಿಳೆ; ಶ್ರೀಮತಿ; ಹೆಂಗಸನ್ನು ಗೌರವಪೂರ್ವಕವಾಗಿ ಸಂಬೋಧಿಸುವಾಗ ಬಳಸುವ ಪದ.
  11. (ಸಾಮಾನ್ಯ ಮಟ್ಟದ ವೃತ್ತಿಗಳಲ್ಲಿರುವವರು ಉನ್ನತ ಮಟ್ಟದವರಂತೆಯೇ ತಮ್ಮನ್ನು ಕಾಣಬೇಕೆಂದು ಅಪೇಕ್ಷಿಸಿದಾಗ ಅವರಿಗೆ ಬಳಸುವ ಗೌರವ ವಿಶೇಷಣವಾಗಿ) ಮಹಿಳೆ; ಶ್ರೀಮತಿ. lady cook ಅಡಿಗೆಯಾಕೆ; lady nurse ಮಹಿಳಾ ನರ್ಸು.
ಪದಗುಚ್ಛ
  1. find the lady =three-card trick.
  2. lady-in-waiting ರಾಣಿಯ ಯಾ ರಾಜಕುಮಾರಿಯ – ಸೆಜ್ಜೆವಳ್ತಿ, ಚೇಟಿ.
  3. lady of the bedchamber (ಬ್ರಿಟಿಷ್‍ ಪ್ರಯೋಗ) = ಪದಗುಚ್ಛ \((2)\).
  4. lady’s bedstraw ಗಾಲಿಯಂ ಕುಲದ, ಹಳದಿ ಹೂಗಳನ್ನು ಬಿಡುವ ಜಾತಿ.
  5. my dear lady (ಸಾಮಾನ್ಯ ಮಹಿಳೆಯನ್ನು ಸಂಬೋಧಿಸುವ ರೀತಿಯಲ್ಲಿ) ಅಮ್ಮ; ಅವ್ವ; ತಾಯಿ.
  6. my good lady = ಪದಗುಚ್ಛ \((5)\).
  7. my lady (ಆಳುಗಳು ಶ್ರೀಮಂತೆಯನ್ನು ಸಂಬೋಧಿಸುವಾಗ) ನನ್ನೊಡತಿ.
  8. my lady wife (ಹಾಸ್ಯ ಪ್ರಯೋಗ) ನನ್ನ ಹೆಂಡತಿ.
  9. old lady (ಆಡುಮಾತು)
    1. ತಾಯಿ; ಮಾತೆ;
    2. ಹೆಂಡತಿ ಯಾ ಉಪಪತ್ನಿ.
  10. Our Lady ಮೇರಿಕನ್ಯೆ; ಮೇರಿ ಕನ್ನಿಕೆ.
  11. our sovereign lady ನಮ್ಮ ಮಹಾರಾಣಿ.
  12. painted lady ಕಪ್ಪು ಮತ್ತು ಬಿಳಿ ಚುಕ್ಕೆಗಳಿರುವ, ಕಿತ್ತಳೆಗೆಂಪು ಬಣ್ಣದ ಒಂದು ಚಿಟ್ಟೆ.
  13. the Ladies (or Ladiesx) (ಬ್ರಿಟಿಷ್‍ ಪ್ರಯೋಗ) ಹೆಂಗಸರ ಸಾರ್ವಜನಿಕ ಶೌಚಾಲಯ.
ನುಡಿಗಟ್ಟು

lady of easy virtue ಸುಲಭಾಂಗನೆ; ಸುಲಭ ಸ್ತ್ರೀ; ನಡತೆಗೆಟ್ಟ ಹೆಣ್ಣು; ಲಂಪಟೆ; ಸೂಳೆ.