lad ಲ್ಯಾಡ್‍
ನಾಮವಾಚಕ
  1. ಹುಡುಗ; ತರುಣ; ಹೈದ; ಮಾಣಿ; ಹರೆಯದವ.
  2. ತರುಣ ಮಗ.
  3. (ಮುಖ್ಯವಾಗಿ ಬಹುವಚನದಲ್ಲಿ) (ಆಡುಮಾತು)
    1. ವ್ಯಕ್ತಿ; ಆಸಾಮಿ; ಇಸಮು.
    2. (ಮುಖ್ಯವಾಗಿ ಕುಡಿತ, ಕೆಲಸ, ಮೊದಲಾದವುಗಳಲ್ಲಿನ) ಜತೆಗಾರ; ಸಂಗಾತಿ; ಗೆಳೆಯ: he’s one of the lads ಅವನು ಸಂಗಾತಿಗಳಲ್ಲಿ ಒಬ್ಬ.
  4. (ಆಡುಮಾತು)
    1. ಕೆಚ್ಚಿನ, ಜೋರಿನ – ವ್ಯಕ್ತಿ.
    2. ಫಟಿಂಗ; ಠಕ್ಕ; ಪೋಕರಿ: he’s quite a lad ಅವನು ಶುದ್ಧ ಫಟಿಂಗ.
  5. (ಬ್ರಿಟಿಷ್‍ ಪ್ರಯೋಗ) (ಯಾವುದೇ ವಯಸ್ಸಿನ) ಕಾಸ್ತಾರ; ಕುದುರೆಯಾಳು; ಕುದುರೆ ಚಾಕರ; ಕುದುರೆ ಲಾಯದವ.