See also 2lackey
1lackey ಲ್ಯಾಕಿ
ನಾಮವಾಚಕ
  1. (ಹೀನಾರ್ಥಕ ಪ್ರಯೋಗ) ಚಮಚ; ದಾಸ; ಗುಲಾಮ; ದಾಸ್ಯದಿಂದ ವರ್ತಿಸುವ ಅಭಿಮಾನಿ, ಅನುಯಾಯಿ.
  2. ಪರೋಪಜೀವಿ; ಪರಪುಟ್ಟ.
  3. (ಚರಿತ್ರೆ) (ಸಾಮಾನ್ಯವಾಗಿ ಪೋಷಾಕು ತೊಟ್ಟ) ಅಡಿಯಾಳು; ಸೇವಕ; ಜವಾನ.
  4. ದಾಸ; ಕಿಂಕರ; ತೈನಾತಿ; ಅತಿವಿನೀತ; ಅಡಿಯಾಳಿನಂತೆ ನಡೆಯುವವನು.
See also 1lackey
2lackey ಲ್ಯಾಕಿ
ಕ್ರಿಯಾಪದ
(ವರ್ತಮಾನ ಕೃದಂತ lackeys, ಭೂತರೂಪ ಮತ್ತು ಭೂತಕೃದಂತ lackeyed).
  1. ಆಜೂಜುವಾರಿ ಮಾಡು; ಮರ್ಜಿ ಹಿಡಿ; ದಾಸಾನುದಾಸನಾಗಿ ವರ್ತಿಸು; ಅತಿ ದೈನ್ಯದಿಂದ ವರ್ತಿಸು.
  2. ಹಾಜರಾಳಾಗಿರು; ಹಾಜರು ಸೇವಕನಾಗಿರು.