labyrinth ಲ್ಯಾಬರಿನ್ತ್‍
ನಾಮವಾಚಕ
  1. ಚಕ್ರಭೀಮನ ಕೋಟೆ; ಚಕ್ರವ್ಯೂಹ; ತೊಳಸುಬಳಸಿನ ಹಾದಿಗಳ ಕಟ್ಟಡ; ಹೊಕ್ಕುಬಳಸಲು ಕಷ್ಟವಾದ ಯಾ ಗೊಂದಲ ಉಂಟುಮಾಡುವ ದಾರಿಗಳುಳ್ಳ ಯಾ ಮಾರ್ಗದರ್ಶನವಿಲ್ಲದೆ ದಾರಿ ಕಂಡುಹಿಡಿಯಲು ಸಾಧ್ಯವಿಲ್ಲದಂತೆ ಹಲವು ದಾರಿಗಳಿಂದ ಕೂಡಿ ತೊಡಕಾಗಿಯೂ ಕ್ರಮಬದ್ಧವಲ್ಲದೆಯೂ ಇರುವ ಕಟ್ಟಡ.
  2. ತೊಡಕಾದ ರಚನೆ; ಜಟಿಲ ವ್ಯವಸ್ಥೆ.
  3. (ಅಂಗರಚನಾಶಾಸ್ತ್ರ) ಒಳಗಿವಿ; ಅಂತರಕರ್ಣ; ಎಲುಬು ಮತ್ತು ಪೊರೆ ಉಳ್ಳ ಕಾಲುವೆಗಳೂ, ಕುಹರಗಳೂ ಉಳ್ಳ, ಒಳ ಕಿವಿಯ ಸಂಕೀರ್ಣ ರಚನೆ.
  4. ಜಟಿಲ ಸ್ಥಿತಿ; ಬಹಳ ತೊಡಕಿನ ಪರಿಸ್ಥಿತಿ; ಗೋಜಲಿನ, ಸಿಕ್ಕುಸಿಕ್ಕಾದ – ಸ್ಥಿತಿ.