laboratory ಲಬಾರಟರಿ, ಲ್ಯಾಬರಟರಿ
ನಾಮವಾಚಕ
(ಬಹುವಚನ laboratories).

ಲಬಾರಟರಿ; ಲ್ಯಾಬರಟರಿ; ಪ್ರಯೋಗಶಾಲೆ; ಪ್ರಯೋಗಾಲಯ; ಪ್ರಯೋಗ ಮಂದಿರ; ವೈಜ್ಞಾನಿಕ ಪ್ರಯೋಗಗಳನ್ನು, ಮುಖ್ಯವಾಗಿ ರಾಸಾಯನಿಕ ಪ್ರಯೋಗಗಳನ್ನು ನಡೆಸಲು, ಬೋಧನೆಗೆ ಯಾ ಔಷಧಗಳು ಮತ್ತು ರಾಸಾಯನಿಕಗಳನ್ನು ತಯಾರಿಸುವುದಕ್ಕೆ ಸಿದ್ಧಪಡಿಸಿರುವ ಕೊಠಡಿ ಯಾ ಕಟ್ಟಡ (ರೂಪಕವಾಗಿ ಸಹ): laboratory of the mind ಮನಸ್ಸಿನ ಪ್ರಯೋಗಶಾಲೆ; ಮಿದುಳು. laboratory of ideas ಕಲ್ಪನೆ ಕಮ್ಮಟ; ವಿಚಾರಾಲಯ; ಭಾವನೆಗಳ, ಕಲ್ಪನೆಗಳ, ಅಭಿಪ್ರಾಯಗಳ, ವಿಚಾರಗಳ – ಆಕರ, ಮೂಲಸ್ಥಾನ, ಜನ್ಮಸ್ಥಾನ.