See also 2label
1label ಲೇಬ್‍(ಬ)ಲ್‍
ನಾಮವಾಚಕ
  1. ಲೇಬಲ್ಲು; ಹೆಸರು ಪಟ್ಟಿ; ಗುರುತು – ಪಟ್ಟಿ, ಚೀಟಿ; ಒಂದು ವಸ್ತುವಿನ ಸ್ವರೂಪ, ಗುಣ, ಮಾಲಿಕ, ಹೆಸರು, ವಿಳಾಸ, ರವಾನೆ ಸ್ಥಳ, ಮೊದಲಾದವನ್ನು ಬರೆದು ಆ ವಸ್ತುವಿಗೆ ಕಟ್ಟುವ, ಅಂಟಿಸುವ ಕಾಗದ, ಲೋಹ, ಮೊದಲಾದವುಗಳ – ಬಿಲ್ಲೆ, ಪಟ್ಟಿ.
  2. (ಮುಖ್ಯವಾಗಿ ಹೀನಾರ್ಥಕ ಪ್ರಯೋಗ) ತಲೆಬರಹ; ತಲೆಚೀಟಿ; ವ್ಯಕ್ತಿ, ಕಲಾಕೃತಿ, ಮೊದಲಾದವನ್ನು ವರ್ಗೀಕರಿಸುವ ಸಣ್ಣ ವಿಶೇಷಣ, ಯಾ ಪದಗುಚ್ಛ.
  3. ಚೀಟಿ; ಲೇಬಲ್ಲು:
    1. ಉಡುಪಿಗೆ ಹೊಲಿದ, ತಯಾರಕರ ಹೆಸರನ್ನುಳ್ಳ ಸಣ್ಣ ಬಟ್ಟೆ.
    2. ಹ್ಯಾಷನ್‍ ಯಾ ರೆಕಾರ್ಡಿಂಗ್‍ ಕಂಪೆನಿಯ ಹೆಸರು, ಲೋಗೋ ಯಾ ಟ್ರೇಡ್‍ ಮಾರ್ಕು: brought it out under his own label ಅವನದೇ ಹೆಸರಿನಲ್ಲಿ (ಟ್ರೇಡ್‍ಮಾರ್ಕಿನಲ್ಲಿ) ಅದನ್ನು ಹೊರತಂದ.
    3. ಗ್ರಾಮಹೋನ್‍ ತಟ್ಟೆಯ ಮಧ್ಯದಲ್ಲಿ ಅದರ ವಿವರಗಳನ್ನು ಅಂಟಿಸಿದ ಕಾಗದದ ಚೂರು.
  4. ಸ್ಟಾಂಪು; ಪಾರ್ಸಲ್‍ ಮೊದಲಾದವುಗಳ ಮೇಲೆ ಇರುವ ತಲೆಚೀಟಿ, ಅಂಟು ಚೀಟಿ.
  5. ಲೇಬಲ್ಲು; ನಿಘಂಟಿನಲ್ಲಿ ಪದದ ಅರ್ಥ ವಿವರಿಸುವಾಗ, ಅದರ ವಿಷಯ, ದಾಖಲೆ, ರಾಷ್ಟ್ರೀಯತೆ, ಮೊದಲಾದವನ್ನು ತಿಳಿಸುವ ಪದ.
  6. (ವಾಸ್ತುಶಿಲ್ಪ) (ಮಳೆಯ ನೀರು ಕೆಳಗಿನ ಭಾಗಕ್ಕೆ ಬೀಳದಂತೆ ತಡೆಯುವ) ಚೆಜ್ಜ; ಸಜ್ಜ; ಮುಂಸೂರು; ಮುಂಚಾಚು.
  7. (ವಂಶಲಾಂಛನ ವಿದ್ಯೆ) ಸಾಮಾನ್ಯವಾಗಿ ಮೂರು ಕೆಳ ಮುಖವಾದ ಚಾಚಿಕೆಗಳಿರುವ ಅಡ್ಡಲಾದ ಪಟ್ಟಿ, ಗೆರೆ ಯಾ ಕಂಬಿಗಳಿರುವ, ಜ್ಯೇಷ್ಠಪುತ್ರನ ಲಾಂಛನ.
See also 1label
2label ಲೇಬ್‍(ಬ್‍)ಲ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ labelling, ಭೂತರೂಪ ಮತ್ತು ಭೂತಕೃದಂತ labelled).
  1. ಲೇಬಲ್‍ ಹಚ್ಚು; ಗುರುತು ಪಟ್ಟಿ, ತಲೆಚೀಟಿ ಮೊದಲಾದವನ್ನು – ಅಂಟಿಸು, ಹಚ್ಚು, ಕಟ್ಟು.
  2. ( ಅಕರ್ಮಕ ಕ್ರಿಯಾಪದ ಸಹ) ವರ್ಗೀಕರಿಸು; ತಲೆಚೀಟಿ ಹಚ್ಚು; ಪಟ್ಟಿಮಾಡು; ಒಂದು ವರ್ಗಕ್ಕೆ ಸೇರಿಸು: the bottle was labelled poison ಆ ಸೀಸೆಯನ್ನು ವಿಷವೆಂದು ವರ್ಗೀಕರಿಸಲಾಯಿತು. labelled them as irresponsible ಅವರನ್ನು ಬೇಜವಾಬ್ದಾರಿ ಎಂದು ಪಟ್ಟಿ ಮಾಡಲಾಯಿತು.
  3. ಲೇಬಲಿಸು; ಪದಾರ್ಥದಲ್ಲಿನ ಅಣುಗಳನ್ನು ಗುರುತಿಸುವುದಕ್ಕಾಗಿ ಅಣುವಿನಲ್ಲಿರುವ ಪರಮಾಣು ಅಥವಾ ಪರಮಾಣುಗಳನ್ನು ಗುರುತಿಸಬಹುದಾದ (ಸಾಮಾನ್ಯವಾಗಿ ವಿಕಿರಣಪಟು) ಪರಮಾಣುವಿನಿಂದ ಪಲ್ಲಟಿಸು.