See also 2laager
1laager ಲಾಗರ್‍
ನಾಮವಾಚಕ
  1. (ಮುಖ್ಯವಾಗಿ ದಕ್ಷಿಣ ಆಹ್ರಿಕ) ಗಾಡಿ ಪಾಳೆಯ; ಬಂಡಿಬೀಡು; ಬಂಡಿಬಿಡಾರ; ವಾಹನ ವೃತ್ತ; ಮುಖ್ಯವಾಗಿ ವೃತ್ತಾಕಾರದಲ್ಲಿ ಬಂಡಿಗಳನ್ನು ಸುತ್ತಲೂ ನಿಲ್ಲಿಸಿ ಏರ್ಪಡಿಸಿದ ನೆಲೆ, ಬೀಡು, ಪಾಳೆಯ.
  2. (ಸೈನ್ಯ) ಸಶಸ್ತ್ರ ವಾಹನ ಮಾಳ; ಶಸ್ತ್ರಸಜ್ಜಿತ ವಾಹನಗಳನ್ನು ನಿಲ್ಲಿಸುವ ಸ್ಥಳ.
See also 1laager
2laager ಲಾಗರ್‍
ಸಕರ್ಮಕ ಕ್ರಿಯಾಪದ
  1. (ವಾಹನಗಳನ್ನು) ಚಕ್ರ ಬೀಡು ನಿಲ್ಲಿಸು; ಸುತ್ತುಪಾಳೆಯ ರಚಿಸು; ವೃತ್ತಾಕಾರವಾಗಿ ನಿಲ್ಲಿಸು.
  2. (ಜನರನ್ನು) ವಾಹನಪಾಳೆಯದಲ್ಲಿಡು.
ಅಕರ್ಮಕ ಕ್ರಿಯಾಪದ

ಗಾಡಿಬೀಡು ಬಿಡು; ವಾಹನ ಪಾಳೆಯ ಹೂಡು.