knowledge ನಾಲಿಜ್‍
ನಾಮವಾಚಕ
  1. (ವ್ಯಕ್ತಿ, ವಿಷಯ, ವಸ್ತುಗಳನ್ನು ಕುರಿತ, ಅನುಭವದಿಂದ ಪಡೆದ) ಅರಿವು; ತಿಳಿವು; ಜ್ಞಾನ; ಪರಿಚಯ.
  2. (ವ್ಯಕ್ತಿಯ) ಜ್ಞಾನವ್ಯಾಪ್ತಿ; ಅರಿವಿನ ಪರಿಧಿ; ತಿಳಿವಳಿಕೆ; ತಿಳಿದ ಮಟ್ಟಿನ ಜ್ಞಾನ: came to my knowledge ನನ್ನ ಅರಿವಿಗೆ ಬಂದಿತು.
  3. ಜ್ಞಾನ; ತಿಳಿದಿರುವುದರ ಮೊತ್ತ, ರಾಶಿ, ಸಮಷ್ಟಿ: every branch of knowledge ಪ್ರತಿಯೊಂದು ಜ್ಞಾನಶಾಖೆಯೂ.
  4. (ವಿಷಯ, ಭಾಷೆ, ಮೊದಲಾದವುಗಳ) ಸೈದ್ಧಾಂತಿಕ ಯಾ ಪ್ರಾಯೋಗಿಕ, ತಾತ್ವಿಕ ಯಾ ವ್ಯಾವಹಾರಿಕ ಜ್ಞಾನ, ಅರಿವು.
  5. (ತತ್ತ್ವಶಾಸ್ತ್ರ) (ಕೇವಲ ಅಭಿಪ್ರಾಯಕ್ಕೆ ವಿರುದ್ಧವಾದಂತೆ) ನಿಷ್ಕೃಷ್ಟ ಜ್ಞಾನ; ನಿಶ್ಚಿತ ಜ್ಞಾನ.
  6. ಸಂಭೋಗ; ಮೈಥುನ.
ನುಡಿಗಟ್ಟು
  1. come to one’s knowledge ಒಬ್ಬನ ಅರಿವಿಗೆ ಬರು; ಒಬ್ಬನಿಗೆ ಗೊತ್ತಾಗು.
  2. to my knowledge
    1. ನನಗೆ ತಿಳಿದ ಮಟ್ಟಿಗೆ.
    2. ನನಗೆ ಖಚಿತವಾಗಿ ಗೊತ್ತಿರುವಂತೆ.