knocker ನಾಕರ್‍
ನಾಮವಾಚಕ
  1. ಬಡಿಗ; ತಾಡಕ; ಬಡಿಯುವ ವ್ಯಕ್ತಿ ಯಾ ವಸ್ತು.
  2. ಬಾಗಿಲ ಬಡಿಗೆ; ದ್ವಾರತಾಡಕ; ಒಳಗಿರುವವರ ಗಮನ ಸೆಳೆಯಲು ಬಾಗಿಲಿನ ಲೋಹದ ತಗಡಿನ. ಮೇಲೆ ಕುಟ್ಟಲಾಗುವಂತೆ ಕದಕ್ಕೆ ಅಳವಡಿಸಿದ, ಸಾಮಾನ್ಯವಾಗಿ ಕಬ್ಬಿಣದ ಯಾ ಹಿತ್ತಾಳೆಯ, ಬಡಿಗೆ, ಬಳೆ, ಮೊದಲಾದವು. Figure: knocker
  3. (ಬಹುವಚನದಲ್ಲಿ) (ಅಶಿಷ್ಟ) ಹೆಂಗಸಿನ – ಮೊಲೆಗಳು, ಸ್ತನಗಳು.
  4. ಬಾಗಿಲ ವ್ಯಾಪಾರಿ; ಬಾಗಿಲಿಂದ ಬಾಗಿಲಿಗೆ ಹೋಗುತ್ತಾ ಮಾರುವವ ಯಾ ಕೊಳ್ಳುವವ.
ನುಡಿಗಟ್ಟು
  1. on the knocker
    1. ಮನೆಮನೆಗೆ, ಬಾಗಿಲಿಂದ ಬಾಗಿಲಿಗೆ ಹೋಗಿ ಕೊಳ್ಳುವ ಯಾ ಮಾರುವ.
    2. ಸಾಲದ ಮೇಲೆ ಯಾ ಸಾಲದಿಂದ ಪಡೆದ.
  2. up to the knocker (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ)
    1. ಉತ್ತಮ ಸ್ಥಿತಿಯಲ್ಲಿ; ಚೆನ್ನಾಗಿ; (ಯಾವ ಕುಂದುಕೊರತೆಯೂ ಇಲ್ಲದೆ) ಸಾಂಗವಾಗಿ.
    2. ಅತ್ಯುತ್ತಮವಾಗಿ; ಶ್ರೇಷ್ಠವಾಗಿ.