See also 2knit
1knit ನಿಟ್‍
ಕ್ರಿಯಾಪದ
(ವರ್ತಮಾನ ಕೃದಂತ knitting, ಭೂತರೂಪ ಮತ್ತು ಭೂತಕೃದಂತ knitted ಯಾ knit).
ಸಕರ್ಮಕ ಕ್ರಿಯಾಪದ
  1. ಹೆಣೆ; ಮುಖ್ಯವಾಗಿ ಉಣ್ಣೆಯ ದಾರದ ಎಳೆಗಳನ್ನು ಸೂಜಿಯಿಂದ ಒಂದರೊಳಗೊಂದು ಪೋಣಿಸಿ ಒತ್ತಾದ ಬಟ್ಟೆ ಮೊದಲಾದವನ್ನು ಮಾಡು ( ಅಕರ್ಮಕ ಕ್ರಿಯಾಪದ ಸಹ).
  2. ಹೆಣಿಗೆ ಯಂತ್ರದಿಂದ (ಬಟ್ಟೆ ಮೊದಲಾದವನ್ನು) ಹೆಣೆ; ಹೆಣಿಗೆ ಹಾಕು.
  3. (ಸರಳ ಹೆಣಿಗೆ) ಹೆಣೆ; ಹೆಣಿಗೆ ಹಾಕು: knit one, purl one ಒಂದು ಸಾದಾ ಹೆಣಿಗೆ ಹಾಕು, ಇನ್ನೊಂದು ಕುಣಿಕೆ ಹೆಣಿಗೆ ಹಾಕು.
  4. (ಹುಬ್ಬುಗಳನ್ನು) ಗಂಟಿಕ್ಕು; ಗಂಟುಹಾಕು.
  5. ಒತ್ತಾಗಿಸು; ಒತ್ತಾಗುವಂತೆ ಮಾಡು.
  6. (ರೂಪಕವಾಗಿ) (ಸಮಾನ ಹಿತಾಸಕ್ತಿ, ವಿವಾಹ ಸಂಬಂಧ, ಮೊದಲಾದವುಗಳ ಮೂಲಕ) ಒಂದುಗೂಡಿಸು; ಒಟ್ಟು ಸೇರಿಸು; ಒಟ್ಟುಗೂಡಿಸು.
ಅಕರ್ಮಕ ಕ್ರಿಯಾಪದ
  1. ಹೆಣೆ; ಹೆಣಿಗೆ ಹಾಕು.
  2. (ಹುಬ್ಬುಗಳ ವಿಷಯದಲ್ಲಿ) ಗಂಟಿಕ್ಕು; ಗಂಟಾಗು.
  3. ಒತ್ತಾಗು; ದಟ್ಟವಾಗು.
  4. (ರೂಪಕವಾಗಿ) (ಮುಖ್ಯವಾಗಿ ಸಮಾನಾಸಕ್ತಿ, ಮದುವೆ, ಮೊದಲಾದವುಗಳ ಮೂಲಕ) ಒಂದುಗೂಡು; ಒಟ್ಟಾಗು.
  5. (ಮುರಿದು ಹೋದ ಎಲುಬುಗಳ ವಿಷಯದಲ್ಲಿ) ಸೇರಿಕೊ; ಒಂದುಗೂಡು; ಒಟ್ಟುಸೇರು.
ಪದಗುಚ್ಛ

knit up

  1. ಹೆಣೆದು ಸರಿಪಡಿಸು; ಹೆಣಿಗೆ ಹಾಕಿ ರಿಪೇರಿ ಮಾಡು.
  2. (ರೂಪಕವಾಗಿ) (ವಾದ ಮೊದಲಾದವನ್ನು) ಸಮಗ್ರಗೊಳಿಸು; ಕುಂದುಕೊರತೆಗಳಿಲ್ಲದಂತೆ – ಮುಗಿಸು, ಕೊನೆಗಾಣಿಸು, ಮುಕ್ತಾಯ ಮಾಡು.
See also 1knit
2knit ನಿಟ್‍
ನಾಮವಾಚಕ

ಹೆಣೆದ ಬಟ್ಟೆ ಯಾ ಉಡುಪು.