See also 2knife
1knife ನೈಹ್‍
ನಾಮವಾಚಕ
(ಬಹುವಚನ knives ಉಚ್ಚಾರಣೆ ನೈವ್ಸ್‍).
  1. (ವಸ್ತುಗಳನ್ನು ಕತ್ತರಿಸುವ ಸಾಧನವಾಗಿ ಯಾ ಆಯುಧವಾಗಿ ಬಳಸುವ) ಚೂರಿ; ಚಾಕು; ಕತ್ತಿ: carving knife (ಮಾಂಸ ಮೊದಲಾದವನ್ನು) ಹೆಚ್ಚುವ, ಕತ್ತರಿಸುವ – ಚೂರಿ. clasp knife ಮಡಿಚು ಚಾಕು, ಚೂರಿ; ಅಲಗನ್ನು ಮಡಿಸಿ ಹಿಡಿಕೆಯಲ್ಲಿ ತೂರಿಸಿಡಬಹುದಾದ ಚಾಕು. pocket knife ಜೇಬಿನ ಚಾಕು; ಜೇಬಿನಲ್ಲಿಟ್ಟುಕೊಳ್ಳಬಹುದಾದ ಚಿಕ್ಕ ಚಾಕು.
  2. (ಯಂತ್ರದ) ಅಲಗು; ಕತ್ತರಿಸುವ ಭಾಗ.
ನುಡಿಗಟ್ಟು
  1. at knife-point ಚಾಕುಗುರಿಯಾಗಿ; ಚಾಕುಎದುರಿನಲ್ಲಿ; ಚಾಕುವಿನ ತಿವಿತದ ಅಪಾಯಕ್ಕೆ, ಬೆದರಿಕೆಗೆ ಒಳಗಾಗಿ.
  2. before you can say knife (ಆಡುಮಾತು) ‘ಆ’ ಎನ್ನುವಷ್ಟರಲ್ಲಿ; ‘ಚಾಕು’ ಎನ್ನುವಷ್ಟರಲ್ಲಿ; ಹಠಾತ್ತಾಗಿ; ಕ್ಷಣಕಾಲದಲ್ಲಿ.
  3. get one’s knife into (a person)
    1. (ಒಬ್ಬನ ಮೇಲೆ) ಕತ್ತಿ ಮಸೆ; ದ್ವೇಷಕಾರು; ಹಗೆಸಾಧಿಸು; ಬದ್ಧವೈರ ತಾಳು.
    2. (ಒಬ್ಬನನ್ನು) ದಯದಾಕ್ಷಿಣ್ಯವಿಲ್ಲದೆ ಚಿತ್ರಹಿಂಸೆಮಾಡು; ಮರುಕವಿಲ್ಲದೆ ಕಾಡು; ನಿರ್ದಯವಾಗಿ ಪೀಡಿಸು.
  4. have a horror of the knife ಶಸ್ತ್ರಚಿಕಿತ್ಸೆಯೆಂದರೆ ದಿಗಿಲು – ಬೀಳು, ವಿಪರೀತ ಬೆದರು.
  5. play a good knife and fork ಮನದಣಿಯೆ ಊಟ ಮಾಡು; ಕಂಠಪೂರ್ತಿ ತಿನ್ನು; ಹೊಟ್ಟೆ ಬಿರಿಯ ತಿನ್ನು.
  6. that one could cut with a knife (ಆಡುಮಾತು) (ಉಚ್ಚಾರಣೆ, ವಾತಾವರಣ, ಮೊದಲಾದವುಗಳ ವಿಷಯದಲ್ಲಿ)
    1. ಸುಸ್ಪಷ್ಟವಾದ; ಸುವಿಶದವಾದ.
    2. ಉಸಿರುಕಟ್ಟಿಸುವ; ಮುಕ್ತಾವಕಾಶವಿಲ್ಲದ; ಮುಕ್ತವಲ್ಲದ.
  7. the knife ಶಸ್ತ್ರಚಿಕಿತ್ಸೆ.
  8. war to the knife
    1. ನಿರ್ದಯ ಸಮರ; ಕಠೋರ ಕದನ; ಲೇಶಮಾತ್ರವೂ ದಯೆ ದಾಕ್ಷಿಣ್ಯವಿಲ್ಲದೆ ನಡೆಸುವ ಯುದ್ಧ.
    2. ಬದ್ಧದ್ವೇಷ; ಕಡುಹಗೆ(ತನ).
See also 1knife
2knife ನೈಹ್‍
ಸಕರ್ಮಕ ಕ್ರಿಯಾಪದ
  1. ಚೂರಿಯಿಂದ – ತುಂಡರಿಸು, ಕತ್ತರಿಸು ಯಾ ಇರಿ.
  2. (ಅಮೆರಿಕನ್‍ ಪ್ರಯೋಗ) ಮೋಸದಿಂದ ಸೋಲಿಸಲು ಪ್ರಯತ್ನಿಸು.