knead ನೀಡ್‍
ಸಕರ್ಮಕ ಕ್ರಿಯಾಪದ
  1. (ಕಲೆಸಿದ) ಹಿಟ್ಟನ್ನು ನಾದು.
  2. (ಕಲೆಸಿದ) ಮಣ್ಣನ್ನು ಮುದ್ದೆ ಮಾಡು.
  3. (ಕಲೆಸಿದ) ಹಿಟ್ಟಿನಿಂದ ಬ್ರೆಡ್‍ ಮಾಡು.
  4. (ಕಲೆಸಿದ) ಮಣ್ಣಿನಿಂದ ಮಡಕೆ ಮೊದಲಾದವನ್ನು ಮಾಡು.
  5. (ರೂಪಕವಾಗಿ) ಕಲೆಸು; ಎರಡೋ ಹೆಚ್ಚೋ ವಸ್ತುಗಳನ್ನು ಸೇರಿಸಿ ಒಟ್ಟಾಗಿಸು, ಒಂದುಗೂಡಿಸು.
  6. (ನಾದುವಂತೆ ಮಾಂಸಖಂಡ ಮೊದಲಾದವನ್ನು) ಹಿಸುಕಿ – ನೀವು, ತೀಡು, ಮರ್ದಿಸು.