See also 2knacker
1knacker ನ್ಯಾಕರ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) ಕುದುರೆ ಕಸಾಯಿ; ಕುದುರೆ ಕಟುಕ; ಯಾವ ಕೆಲಸಕ್ಕೂ ಬಾರದಂತಾಗಿರುವ ಕುದುರೆಗಳನ್ನು (ಅವುಗಳ ತೊಗಲು, ಗೊರಸು, ಮೊದಲಾದವುಗಳಿಗಾಗಿ) ಕೊಂಡು ಕೊಲ್ಲುವವನು.
  2. ಗುಜರಿ ವ್ಯಾಪಾರಿ; ಹಳೆಯ ಮನೆ, ಹಡಗು, ಮೊದಲಾದವುಗಳನ್ನು ಅವುಗಳಿಂದ ಸಿಗುವ ವಸ್ತುಗಳಿಗಾಗಿ ಕೊಳ್ಳುವವನು.
See also 1knacker
2knacker ನ್ಯಾಕರ್‍
ಸಕರ್ಮಕ ಕ್ರಿಯಾಪದ
  1. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಕೊಲ್ಲು.
  2. (ರೂಪಕವಾಗಿ) (ಮುಖ್ಯವಾಗಿ ಭೂತಕೃದಂತ ರೂಪದಲ್ಲಿ) ದಣಿಸು; ಸುಸ್ತು ಮಾಡಿ ಬಿಡು; ಶಕ್ತಿಯನ್ನೆಲ್ಲಾ ಹಿಂಡಿಬಿಡು.