knack ನ್ಯಾಕ್‍
ನಾಮವಾಚಕ
  1. ಜಾಣ್ಮೆ; ಕೌಶಲ; ಚಾತುರ್ಯ; ಚಾಲಾಕು; ಯಾವುದೇ ಕೆಲಸ ಮಾಡಲು ಪ್ರಯತ್ನಪೂರ್ವಕವಾಗಿ ಗಳಿಸಿದ ಯಾ ಹುಟ್ಟಿನಿಂದ ಪಡೆದ ಶಕ್ತಿ, ಸಾಮರ್ಥ್ಯ: he has a knack for doing the right thing at the right moment ಸರಿಯಾದ ಕಾಲದಲ್ಲಿ ಸರಿಯಾದ ಕೆಲಸವನ್ನು ಮಾಡುವ ಜಾಣ್ಮೆ ಅವನಲ್ಲಿದೆ.
  2. (ಪ್ರಾಚೀನ ಪ್ರಯೋಗ) ಕುಶಲತೆಯಿಂದ ತಯಾರಿಸಿದ ಯಾವುದೇ ವಸ್ತು, ಸಲಕರಣೆ: knacks and geegaws ಕುಶಲ ವಸ್ತುಗಳು ಹಾಗೂ ಇತರ ಥಳಕುಪಳಕು ವಸ್ತುಗಳು.
  3. (ಮಾತನಾಡುವ ಯಾ ಕಾರ್ಯ ಮಾಡುವ)
    1. ರೀತಿ; ವಿಧಾನ; ಬಗೆ.
    2. ಪ್ರವೃತ್ತಿ; ಸ್ವಭಾವ; ಅಭ್ಯಾಸ; ಚಾಳಿ; ವಿಚಿತ್ರ ನಡವಳಿಕೆ: his knack of borrowing is often irritating ಸಾಲ ಕೇಳುವ ಅವನ ಚಾಳಿ ಹಲವೊಮ್ಮೆ ಸಿಟ್ಟು ಬರಿಸುತ್ತದೆ.