kiosk ಕೀಆಸ್ಕ್‍
ನಾಮವಾಚಕ

ಕಿಯಾಸ್ಕ್‍:

  1. ಬೇಸಗೆ ಚಪ್ಪರ; ಬಿಸಿಲು ಚಪ್ಪರ; ತುರ್ಕಿ ಮತ್ತು ಇರಾನ್‍ ದೇಶಗಳಲ್ಲಿ ಸಾಮಾನ್ಯವಾಗಿ ಬಳಸುವ, ಸುತ್ತಲೂ ತೆರೆದಿರುವ, ಹಗುರವಾದ ಚಪ್ಪರ. Figure: kiosk
  2. (ವೃತ್ತಪತ್ರಿಕೆಗಳನ್ನು, ಆಹಾರವನ್ನು ಮಾರುವುದು, ಬ್ಯಾಂಡ್‍ ಮೇಳ ನಡೆಸುವುದು, ಮೊದಲಾದವುಗಳಿಗಾಗಿ ಹೊರಾಂಗಣದಲ್ಲಿ ಯಾ ಒಳಾಂಗಣದಲ್ಲಿ ನಿರ್ಮಿಸಿದ, ಮುಂಭಾಗ ತೆರೆದಿರುವ) ಕೊಠಡಿ; ಮಂಟಪ; ಚಪ್ಪರ.
  3. (ಸಾರ್ವಜನಿಕರ ಬಳಕೆಗಾಗಿ ಇಟ್ಟ) ಟೆಲಿಹೋನಿನ – ಚಪ್ಪರ, ಮಂಟಪ, ಪೆಟ್ಟಿಗೆಗೂಡು.
  4. (ಆಸ್ಟ್ರೇಲಿಯ) ಉಪಾಹಾರ ಗೃಹ; ಉದ್ಯಾನ, ಮೃಗಾಲಯ, ಮೊದಲಾದವುಗಳಲ್ಲಿ ತಿಂಡಿ ತೀರ್ಥಗಳನ್ನು ಒದಗಿಸುವ ಕಟ್ಟಡ.