kinetic ಕಿ(ಕೈ)ನೆಟಿಕ್‍
ಗುಣವಾಚಕ
  1. ಚಲನೆಯ ಯಾ ಚಲನೆಗೆ ಸಂಬಂಧಿಸಿದ: kinetic theory of heat ಶಾಖದ ಚಲನ ಸಿದ್ಧಾಂತ; ಅಣು ಪರಮಾಣುಗಳ ಚಲನೆಯ ಕಾರಣ ಅವು ಪಡೆದಿರುವ ಶಕ್ತಿಯೇ ಒಟ್ಟು ಕಾಯದಲ್ಲಿ ಶಾಖದ ರೂಪದಲ್ಲಿ ಕಾಣಿಸಿಕೊಳ್ಳುವುದೆಂಬ ವಾದ. kinetic theory of gases ಅನಿಲದ ಚಲನ ಸಿದ್ಧಾಂತ; ಅನಿಲಸ್ಥಿತಿಯ ಅಣು ಪರಮಾಣುಗಳ ಚಲನದ ಪರಿಣಾಮ ಎಂಬ ಸಿದ್ಧಾಂತ.
  2. ಚಲನಶಾಸ್ತ್ರದ ಯಾ ಅದಕ್ಕೆ ಸಂಬಂಧಿಸಿದ.