See also 2kindly
1kindly ಕೈಂಡ್‍ಲಿ
ಕ್ರಿಯಾವಿಶೇಷಣ
  1. ಮೃದುವಾಗಿ; ಸೌಮ್ಯವಾಗಿ; ಹಿತಕರವಾಗಿ.
  2. ಸ್ನೇಹಪೂರ್ಣವಾಗಿ; ವಿಶ್ವಾಸದಿಂದ; ಪ್ರೀತಿಯುತವಾಗಿ: speak kindly to the poor ಬಡವರನ್ನು ಪ್ರೀತಿಯಿಂದ ಮಾತನಾಡಿಸು.
  3. ದಯೆಯಿಂದ; ಕರುಣೆಯಿಂದ.
  4. (ಕೋರಿಕೆ, ಬೇಡಿಕೆಗಳಲ್ಲಿ ಮರ್ಯಾದಾರ್ಥದಲ್ಲಿ ಯಾ ವ್ಯಂಗ್ಯಪೂರ್ವಕ ಆಜ್ಞೆಗಳಲ್ಲಿ) ದಯಮಾಡಿ; ದಯೆಯಿಟ್ಟು: kindly grant my request ನನ್ನ ಬೇಡಿಕೆಯನ್ನು ದಯಮಾಡಿ ನಡೆಸಿಕೊಡಿ. will you kindly do as commanded ಹುಕುಮಿನಂತೆ ದಯವಿಟ್ಟು ಮಾಡುತ್ತೀಯಾ? kindly leave me alone ದಯೆಯಿಟ್ಟು ನನ್ನ ಪಾಡಿಗೆ ನನ್ನನ್ನು ಬಿಡಿ.
ಪದಗುಚ್ಛ
  1. look kindly upon ಸಹಾನುಭೂತಿಯಿಂದ ಪರಿಗಣಿಸು.
  2. take (a thing) kindly ಸಂತೋಷದಿಂದ (ಪದಾರ್ಥವನ್ನು, ವಿಷಯವನ್ನು) ಸ್ವೀಕರಿಸು.
  3. take kindly to (ವಸ್ತು ಯಾ ವ್ಯಕ್ತಿಯಿಂದ) ಸಂತುಷ್ಟನಾಗು; ಸುಪ್ರೀತನಾಗು; ಸಂತೃಪ್ತನಾಗು.
  4. thank kindly ಭಾರಿ ಕೃತಜ್ಞತೆ ತೋರು; ಪೂರ್ಣ ಹಾರ್ದಿಕತೆಯಿಂದ ಕೃತಜ್ಞತೆ ಸಲ್ಲಿಸು.
See also 1kindly
2kindly ಕೈಂಡ್‍ಲಿ
ಗುಣವಾಚಕ
( ತರರೂಪkindlier, ತಮರೂಪkindliest).
  1. ದಯಾಳು; ದಯಾಶಾಲಿ; ಕರುಣಾಶೀಲನಾದ.
  2. ಸ್ನೇಹಪೂರ್ಣ; ವಿಶ್ವಾಸದಿಂದ ಕೂಡಿದ; ಸಹಾನುಭೂತಿಯ; ಪ್ರೀತಿಯಿಂದ ಕೂಡಿದ.
  3. (ವಾಯುಗುಣ ಮೊದಲಾದವುಗಳ ವಿಷಯದಲ್ಲಿ) ಹಿತಕರ; ಆಹ್ಲಾದಕರ; ಹಾಯಾದ; ಸುಖಾವಹ; ಅಪ್ಯಾಯಮಾನ.
  4. (ಪ್ರಾಚೀನ ಪ್ರಯೋಗ) (ಬ್ರಿಟಿಷ್‍ ಪ್ರಯೋಗ) ದೇಶೀಯ; ನಾಡವ; ನಾಡಿಗ; ತನ್ನ ನಾಡಿನಲ್ಲೇ ಹುಟ್ಟಿದವನು: a kindly Scot ಸ್ಕಾಟ್‍ಲೆಂಡಿನ ದೇಶೀಯ.