kindle ಕಿಂಡ್‍(ಡ)ಲ್‍
ಸಕರ್ಮಕ ಕ್ರಿಯಾಪದ
  1. (ದೀಪ, ಜ್ಯೋತಿ, ಬೆಂಕಿ, ಉರಿ, ಮೊದಲಾದವನ್ನು) ಹಚ್ಚು; ಬೆಳಗಿಸು; ಹೊತ್ತಿಸು; ಉರಿಸು; ಉರಿ ಹೊತ್ತಿಸು.
  2. (ಕೋಪ ತಾಪಗಳನ್ನು) ಕೆರಳಿಸು; ರೇಗಿಸು; ಉದ್ರೇಕಿಸು.
  3. (ವ್ಯಕ್ತಿಯಲ್ಲಿ ಯಾವುದೇ ಭಾವವನ್ನು) ಉಂಟುಮಾಡು; ಕೆರಳಿಸು; ಪ್ರಚೋದಿಸು; ಉತ್ತೇಜಿಸು.
  4. (ವ್ಯಕ್ತಿಯನ್ನು ಯಾವುದೇ ಕೆಲಸ ಮಾಡಲು) ಪ್ರಚೋದಿಸು; ಪ್ರೇರಿಸು; ಸ್ಫೂರ್ತಿಗೊಳಿಸು; ಆವೇಶಗೊಳಿಸು; ಉತ್ತೇಜಿಸು; ಹುರಿದುಂಬಿಸು; ಹುರುಪುಗೊಳಿಸು: kindle enthusiasm for the project ಯೋಜನೆಗೆ ಹುರಿದುಂಬಿಸು. kindle jealousy in a rival ಪ್ರತಿಸ್ಪರ್ಧಿಯಲ್ಲಿ ಅಸೂಯೆ ಪ್ರಚೋದಿಸು.
  5. ಪ್ರಜ್ವಲಗೊಳಿಸು; ಬೆಳಗುವಂತೆ ಮಾಡು; ಉಜ್ವಲವಾಗಿಸು; ಪ್ರಕಾಶಮಾನವಾಗಿಸು; ಜ್ವಲಿಸುವಂತೆ ಮಾಡು; ಹೊಳೆಯುವಂತೆ ಮಾಡು: kindle the embers to a glow ಕೆಂಡಗಳನ್ನು ಜ್ವಲಿಸುವಂತೆ ಮಾಡು.
ಅಕರ್ಮಕ ಕ್ರಿಯಾಪದ
  1. (ರೂಪಕವಾಗಿ) (ಭಾವ ಮೊದಲಾದವುಗಳಿಂದ) ಜೀವಂತವಾಗು; ಹುರಿದುಂಬು; ಹುರುಪುಗೊಳ್ಳು; ಉದ್ದೀಪ್ತನಾಗು; ಆವೇಶಗೊಳ್ಳು; ಸ್ಫೂರ್ತಿಗೊಳ್ಳು: his imagination kindled ಅವನ ಪ್ರತಿಭೆ ಉದ್ದೀಪ್ತವಾಯಿತು.
  2. ಹೊತ್ತಿಕೊ; ಭುಗ್ಗನೆ ಉರಿಏಳು.
  3. ಪ್ರಕಾಶಮಾನವಾಗು; ಪ್ರಜ್ವಲಿಸು.
  4. (ವ್ಯಕ್ತಿಗೆ, ಕ್ರಿಯೆಗೆ, ಮೊದಲಾದವುಗಳಿಗೆ) ಪ್ರತಿಕ್ರಿಯೆ ತೋರು. ತೋರಿಸು: kindle to his courage ಅವನ ಧೈರ್ಯಕ್ಕೆ ಪ್ರತಿಕ್ರಿಯೆ ತೋರಿಸು.
ಪದಗುಚ್ಛ

kindle up

  1. ಹೊತ್ತಿಕೊ ಯಾ ಹೊತ್ತಿಸು.
  2. ಕೆರಳು ಯಾ ಕೆರಳಿಸು.
  3. ಬೆಳಗು ಯಾ ಬೆಳಗಿಸು; ಪ್ರಕಾಶಿಸು ಯಾ ಪ್ರಕಾಶಮಾನವಾಗಿಸು.
  4. ಉದ್ದೀಪ್ತವಾಗು ಯಾ ಉದ್ದೀಪನಗೊಳಿಸು.