See also 2kind
1kind ಕೈಂಡ್‍
ನಾಮವಾಚಕ
  1. (ಸಸ್ಯ, ಪ್ರಾಣಿ, ಮೊದಲಾದವುಗಳ) ಬುಡಕಟ್ಟು; ಕುಲ: human kind ಮಾನವ ಕುಲ.
  2. ಜಾತಿ; ಸ್ವಾಭಾವಿಕ ವರ್ಗ; rabbit kind ಮೊಲದ ಜಾತಿ.
  3. (ಕ್ರೈಸ್ತಧರ್ಮ) ಪ್ರಭುಭೋಜನ ಸಂಸ್ಕಾರದಲ್ಲಿ ವಿನಿಯೋಗಿಸುವ ಬ್ರೆಡ್ಡು ಯಾ ವೈನು.
  4. (ಹೇಳುತ್ತಿರುವ ವಿಷಯ ಕಟ್ಟುನಿಟ್ಟಾದದ್ದಲ್ಲ, ನಿಷ್ಕೃಷ್ಟವಾದದ್ದಲ್ಲ, ಯಾ ಉತ್ಪ್ರೇಕ್ಷೆಯ ಮಾತು, ಎಂದು ಮುಂತಾಗಿ ಸೂಚಿಸುವಲ್ಲಿ) ಏನೋ ಒಂದು ಬಗೆಯ; ಒಂದು – ನಮೂನೆಯ, ವಿಧದ, ತೆರನ, ತರಹದ: he is a kind of millionaire ಅವನು ಒಂದು ಬಗೆಯ ಲಕ್ಷಾಧಿಪತಿ. I felt a kind of compunction ನನಗೆ ಏನೋ ಒಂದು ಬಗೆಯ ಅನುತಾಪ ಯಾ ಪಶ್ಚಾತ್ತಾಪ ಉಂಟಾಯಿತು.
  5. (ಪ್ರಾಚೀನ ಪ್ರಯೋಗ) ನಿಸರ್ಗ, ಪ್ರಕೃತಿ; ನಿಸರ್ಗದ – ಕ್ರಮ ವ್ಯವಸ್ಥೆ.
  6. (ವ್ಯಕ್ತಿ ಮೊದಲಾದವಕ್ಕೆ) ಸಹಜವಾದ – ಮಾರ್ಗ, ರೀತಿ, ಸ್ವಭಾವ, ವಿಧಾನ: they act after their kind ತಮ್ಮ ತಮ್ಮ ಸಹಜ ರೀತಿಗೆ ತಕ್ಕಂತೆ ಅವರು ವರ್ತಿಸುತ್ತಾರೆ.
  7. ಸ್ವಭಾವ; ಪ್ರಕೃತಿ; ಗುಣ; ಲಕ್ಷಣ: they differ in kind not merely in degree ಅವುಗಳಿಗಿರುವ ವ್ಯತ್ಯಾಸ ಪ್ರಮಾಣಭೇದವಷ್ಟೇ ಅಲ್ಲ, ಗುಣಭೇದ ಕೂಡ.
ಪದಗುಚ್ಛ
  1. law of kind ನಿಸರ್ಗದ ನಿಯಮ.
  2. kind of (ಆಡುಮಾತು) ಸ್ವಲ್ಪಮಟ್ಟಿಗೆ: I had kind of expected it ನಾನು ಸ್ವಲ್ಪಮಟ್ಟಿಗೆ ಅದನ್ನು ನಿರೀಕ್ಷಿಸಿದ್ದೆ.
  3. nothing of the kind
    1. ಆ ತೆರನದಲ್ಲವೇ ಅಲ್ಲ. ಅಂಥದಲ್ಲವೇ ಅಲ್ಲ; ಹಾಗಲ್ಲವೇ ಅಲ್ಲ.
    2. (ನಿರಾಕರಣೆ ಸೂಚಿಸುವಲ್ಲಿ) ಖಂಡಿತ ಇಲ್ಲ; ಬಿಲ್‍ಕುಲ್‍ ಇಲ್ಲ; ಸುತರಾಂ ಇಲ್ಲ.
  4. of a kind
    1. (ತಿರಸ್ಕಾರದಲ್ಲಿ) ಯಾವುದೋ ಒಂದು ಬಗೆಯ: we had coffee of a kind ನಮಗೆ ಯಾವುದೋ ಒಂದು ಬಗೆಯ ಕಾಹಿ ಸಿಕ್ಕಿತು; ಏನೋ ಹೆಸರಿಗೆ ಕಾಹಿ ಎನ್ನುವುದು ಸಿಕ್ಕಿತು.
    2. ಒಂದು ಮುಖ್ಯವಾದ ಅಂಶದಲ್ಲಿ, ರೀತಿಯಲ್ಲಿ – ಒಂದೇ ರೀತಿಯ, ಒಂದೇ ತೆರನ, ಒಂದೇ ಬಗೆಯ: they’re two of a kind ಅವರಿಬ್ಬರೂ (ಒಂದು ಮುಖ್ಯವಾದ ಅಂಶದಲ್ಲಿ) ಒಂದೇ ಬಗೆಯವರು.
  5. of its kind ಅದೇ ವರ್ಗದ; ಅದೇ ವರ್ಗಕ್ಕೆ ಸೇರಿದ; ಅದರ ಬಗೆಯ ಪರಿಮಿತಿಯಲ್ಲಿ; ಅದರಂಥ: good of its kind ಅದರಂಥದ್ದರಲ್ಲಿ ಒಳ್ಳೆಯದು.
  6. one’s own kind ತನ್ನಂಥವರು; ತನ್ನ ಸಮಾನರು; ತನ್ನೊಡನೆ ಅನೇಕ ಸಮಾನಾಂಶಗಳನ್ನು ಹೊಂದಿರುವವರು; ತನ್ನ ಸದೃಶರು.
  7. something of the kind ಪ್ರಸಕ್ತ ವಸ್ತುವಿನ ಯಾ ವಿಷಯದ ಬಗೆಯದು ಯಾವುದೋ ಒಂದು; ಅಂಥದ್ದೇ ಒಂದು; ಅದೇ ತರಹದ ಒಂದು.
  8. the kind of ಬಗೆಯ; ತೆರನ; ತರಹೆಯ; ವಿಧದ: this is the kind of thing I meant ನನ್ನ ಮನಸ್ಸಿನಲ್ಲಿದ್ದುದು ಈ ಬಗೆಯ ವಿಷಯ; ನಾನು ಹೇಳಬಯಸಿದ್ದು ಈ ವಿಧದ ವಿಷಯ.
  9. this (or these) kind of (ಆಡುಮಾತು) ಈ ಬಗೆಯ: this kind of men annoy me ಈ ಬಗೆಯ ಜನ ನನಗೆ ಕಿರಿಕಿರಿ ಉಂಟು ಮಾಡುತ್ತಾರೆ, ಸಿಟ್ಟು ಬರಿಸುತ್ತಾರೆ.
  10. what kind of ಎಂತಹ; ಎಂಥ; ಯಾವ ಬಗೆಯ, ರೀತಿಯ, ಜಾತಿಯ: what kind of tree is this? ಇದು ಯಾವ ಜಾತಿಯ ಮರ?
ನುಡಿಗಟ್ಟು
  1. a kind of (ಬಳಸಿರುವ ಪದದಲ್ಲಿ ಒಂದು ರೀತಿಯ, ಬಗೆಯ ಅಸ್ಪಷ್ಟತೆ, ಉತ್ಪ್ರೇಕ್ಷೆ, ಮೊದಲಾದವುಗಳನ್ನು ಸೂಚಿಸುವಲ್ಲಿ): a kind of Kumaravyasa of our times ನಮ್ಮ ಕಾಲದ ಒಂದು ರೀತಿಯ ಕುಮಾರವ್ಯಾಸನಂತೆ.
  2. in kind
    1. (ಹಣದ ರೂಪದಲ್ಲಿರದೆ) ವಸ್ತುರೂಪದಲ್ಲಿ; ಪದಾರ್ಥ ರೂಪದಲ್ಲಿ: he repaid the loan in kind ಸಾಲವನ್ನು ವಸ್ತು ರೂಪದಲ್ಲಿ ವಾಪಸು ಮಾಡಿದ.
    2. (ರೂಪಕವಾಗಿ) ಅಂತೆಯೇ; ಅದೇ ರೀತಿಯಲ್ಲಿ; ಅದೇ ರೂಪದಲ್ಲಿ: repay his insolence in kind ಅವನ ಸೊಕ್ಕಿಗೆ ಬದಲು ಸೊಕ್ಕನ್ನೇ ತೋರು.
    3. ಗುಣದಲ್ಲಿ; ಸ್ವರೂಪದಲ್ಲಿ: differ in degree but not in kind ಗುಣಮಟ್ಟದಲ್ಲಿ ವ್ಯತ್ಯಾಸವೇ ಹೊರತು ಸ್ವರೂಪದಲ್ಲಲ್ಲ.
See also 1kind
2kind ಕೈಂಡ್‍
ಗುಣವಾಚಕ
  1. ದಯಾಮಯ; ಕರುಣಾಳು; ಕರುಣಾಮಯ: of a kind nature ದಯಾಳು ಸ್ವಭಾವದ; ದಯಾಗುಣದ.
  2. ಮೃದುಸ್ವಭಾವದ; ಸೌಮ್ಯ; ಉಪಕಾರಶೀಲ.
  3. (ಒಬ್ಬರ ವಿಷಯದಲ್ಲಿ) ಸ್ನೇಹಮಯ; ಸ್ನೇಹ ಸೌಹಾರ್ದದಿಂದ ಕೂಡಿದ: he is kind to people ಅವನು ಜನರ ವಿಷಯದಲ್ಲಿ ಸ್ನೇಹ ಸೌಹಾರ್ದದಿಂದ ವರ್ತಿಸುತ್ತಾನೆ.
  4. ಒಲವಿನಿಂದ ಕೂಡಿದ; ಒಲವಿನ; ಪ್ರೀತಿ ವಿಶ್ವಾಸದಿಂದ ಕೂಡಿದ.