killer ಕಿಲ್ಲರ್‍
ನಾಮವಾಚಕ
  1. ಹಂತಕ; ಹತಕ:
    1. ಕೊಲ್ಲುವ ವ್ಯಕ್ತಿ ಯಾ ಪ್ರಾಣಿ.
    2. ಕೊಲೆಗಾರ; ಕೊಲೆಪಾತಕಿ; ಕೊಲ್ಲುಗ.
  2. (ಆಡುಮಾತು)
    1. ಮನಮೆಚ್ಚುವ, ದುಸ್ಸಾಧ್ಯವಾದ ಯಾ ಸೊಗಸಾದ ವಸ್ತು, ವಿಷಯ: this one is quite difficult, but the next one is a real killer ಇದು ತುಂಬಾ ಕಷ್ಟ, ಆದರೆ ಮುಂದಿನದು ನಿಜವಾಗಿ ಸೊಗಸಾದುದು.
    2. ಉಲ್ಲಾಸಭರಿತ ಹಾಸ್ಯ, ಜೋಕು.
    3. ನಿರ್ಣಾಯಕ ಹೊಡೆತ, ಏಟು: his brilliant header proved to be the killer ಅವನು ಭರ್ಜರಿಯಾಗಿ ಹೆಡ್‍ ಮಾಡಿದ್ದು ನಿರ್ಣಾಯಕ ಹೊಡೆತವಾಯಿತು.
ಪದಗುಚ್ಛ

killer instinct

  1. ಕೊಲ್ಲುವ (ಸಹಜ) ಪ್ರವೃತ್ತಿ; ಕೊಲ್ಲಬೇಕೆಂಬ (ಸಹಜ) ಬುದ್ಧಿ.
  2. ನಿರ್ದಯ – ಸ್ವಭಾವ, ಗುಣ.