kicker ಕಿಕರ್‍
ನಾಮವಾಚಕ
  1. ಒದೆಗ; ಒದೆಯುವವನು ಯಾ ಒದೆಯುವ ಪ್ರಾಣಿ ಯಾ ವಸ್ತು.
  2. ಒದೆಯುವ ಕುದುರೆ.
  3. (ಆಡುಮಾತು) (ಕೌಲು, ಕರಾರು, ಮೊದಲಾದವುಗಳಲ್ಲಿಯ) ಅನ್ಯಾಯವೋ ಪ್ರತಿಕೂಲವೋ ಆದ ಷರತ್ತು ಯಾ ಅಂಶ.
  4. (ಕಾಂಕ್ರೀಟ್‍ ಕಟ್ಟಡದಲ್ಲಿ) ಕಂಬದ ಬುಡದಲ್ಲಿರುವ ಗದ್ದಿಗೆ ಕಲ್ಲು, ಪೀಠಶಿಲೆ.
  5. (ನೌಕಾಯಾನ)
    1. ಕಡಿಮೆ ಬಲದ ಸಣ್ಣ ಮೋಟಾರು ಯಂತ್ರ.
    2. ಪ್ರಯಾಣಿಕ ಹಡಗಿನ ಸಹಾಯಕ ಎಂಜಿನ್ನು.
  6. (ಅಶಿಷ್ಟ) (ಮಿಶ್ರಿತ ಪಾನೀಯದಲ್ಲಿ) ಆಲ್ಕೋಹಾಲ್‍ ಇರುವ ಮದ್ಯ.
  7. (ಪತ್ರಿಕೆ ಮೊದಲಾದವುಗಳಲ್ಲಿ) ಅಗ್ರಪಂಕ್ತಿಯ ಮೇಲೆ ವಿಶೇಷ ಗಮನ ಸೆಳೆಯುವ ಸಲುವಾಗಿ ಮುದ್ರಿಸುವ ಕಿರುಪಂಕ್ತಿ.
  8. (ಕ್ರಿಕೆಟ್‍) ಪುಟವೇಳುವ ಚೆಂಡು; ನೆಗೆ ಚೆಂಡು; ಬೌಲ್‍ ಮಾಡಿದಾಗ ಎಗುರೇಳುವ ಚೆಂಡು.