keyword ಕೀವರ್ಡ್‍
ನಾಮವಾಚಕ
  1. ಗೂಢಲಿಪಿಭೇದಕ; ಗುಪ್ತಲಿಪಿ ಕೈ; ಗೂಢಲಿಪಿ ಬರಹವನ್ನು ಓದಲು ಸಹಾಯಕವಾದ ಭೇದಕ ಸಂಕೇತ.
  2. ಮುಖ್ಯ ಸೂಚಿಪದ; ಪ್ರಮುಖ ಸೂಚಿಕೆ ಪದ; ಅನುಕ್ರಮಣಿಕೆಯನ್ನು ತಯಾರಿಸುವಲ್ಲಿ ವಿಷಯ ಮೊದಲಾದವನ್ನು ಸೂಚಿಸಲು ಬಳಸುವ ಪ್ರಮುಖ ಪದ: keyword in context ಮೂಲ ದಾಖಲೆಯಲ್ಲಿ ಅದಕ್ಕೆ ತರುವಾಯದ ಪದಗಳ ಜೊತೆ ದಾಖಲಿಸಿದ ಪ್ರಮುಖ ಸೂಚಿಪದ; ಪ್ರಮುಖ ಪ್ರಾಕರಣಿಕ ಸೂಚಿಪದ.
  3. ಮಹತ್ವದ ಪದ; ಅತಿ ಮುಖ್ಯ ಪದ; ಬಹಳ ಮಹತ್ವದ ಯಾ ಅರ್ಥವತ್ತಾದ ಶಬ್ದ.