See also 2keynote
1keynote ಕೀನೋಟ್‍
ನಾಮವಾಚಕ
  1. (ಸಂಗೀತ) ಜೀವಸ್ವರ; ರಾಗಕ್ಕೆ ಆಧಾರವಾದ, ರಾಗದ ಸ್ವರೂಪವನ್ನು ನಿರ್ಧರಿಸುವ ಸ್ವರ.
  2. (ರೂಪಕವಾಗಿ) (ಭಾಷಣ, ಲೇಖನ, ಯೋಜನೆ, ಕಾರ್ಯಕ್ರಮ, ಮೊದಲಾದವುಗಳ) ಮುಖ್ಯ ಭಾವ ಯಾ ಭಾವನೆ; ಪ್ರಧಾನ ವಿಷಯ; ಮುಖ್ಯ ಅಭಿಪ್ರಾಯ ಯಾ ಧೋರಣೆ: the keynote of the whole occasion ಇಡಿ ಸಂದರ್ಭದ ಮುಖ್ಯ ಭಾವ. unemployment was the keynote of the conference ನಿರುದ್ಯೋಗವು ಸಮ್ಮೇಳನದ ಪ್ರಧಾನ ವಿಷಯವಾಗಿತ್ತು.
See also 1keynote
2keynote ಕೀನೋಟ್‍
ಗುಣವಾಚಕ

(ಸಭೆ, ಸಮ್ಮೇಳನ, ಚರ್ಚೆ, ಮೊದಲಾದವುಗಳಲ್ಲಿ ಮಾಡುವ ಭಾಷಣದ ವಿಷಯದಲ್ಲಿ) ಪ್ರಧಾನ ಧೋರಣೆಯನ್ನು ನಿರ್ಮಿಸುವ ಯಾ ಮುಖ್ಯ ವಿಷಯವನ್ನು ಮಂಡಿಸುವ ಉದ್ದೇಶದಿಂದ ಮಾಡಿದ ಯಾ ಉದ್ದೇಶ ಹೂಡಿರುವ: keynote speech (or address) ಪ್ರಧಾನ ಭಾಷಣ; ವಿಷಯಮಂಡನಾತ್ಮಕ ಭಾಷಣ; ಧೋರಣೆ ಸೂಚಕ ಯಾ ನಿರ್ಮಾಪಕ ಭಾಷಣ.