kernel ಕರ್ನಲ್‍
ನಾಮವಾಚಕ
  1. (ಕರಟವುಳ್ಳ ಕಾಯಿಯ ಚಿಪ್ಪಿನ ಒಳಗೆ ಯಾ ಓಟೆಯುಳ್ಳ ಕಾಯಿಯ, ಹಣ್ಣಿನ, ಓಟೆಯ ಸುತ್ತ ಇರುವ) ತಿರುಳು.
  2. (ಹೊಟ್ಟು, ಸಿಪ್ಪೆ, ಮೊದಲಾದವುಗಳ ಒಳಗಿನ) ಕಾಳು; ಬೀಜ; ಧಾನ್ಯ; ಉದಾಹರಣೆಗೆ ಅಕ್ಕಿ, ಗೋಧಿ ಮೊದಲಾದವುಗಳ ಕಾಳು.
  3. (ರೂಪಕವಾಗಿ) (ಯಾವುದೇ ವಸ್ತುವಿನ) ಕೇಂದ್ರ; ಸತ್ವಭಾಗ; ತಿರುಳು; ಹುರುಳು; ಗರ್ಭ; ಹೃದಯ: that is the kernel of the argument ಅದೇ ಈ ವಾದದ ತಿರುಳು.