keeper ಕೀಪರ್‍
ನಾಮವಾಚಕ
  1. ಪಾಲಕ; ಪೋಷಕ; ರಕ್ಷಕ: am I my brother’s keep? ನಾನೇನು ನನ್ನ ಸೋದರನ ಪಾಲಕನೇ?
  2. (ವ್ರತ, ಕಾಯಿದೆ, ನಿಯಮ, ಪದ್ಧತಿ, ಸಂಪ್ರದಾಯ, ಹಬ್ಬ, ಮೊದಲಾದವನ್ನು) ಪಾಲಿಸುವವನು; ಪಾಲಕ; ಆಚರಿಸುವವನು.
  3. (ಸೆರೆಮನೆ, ಸೆರೆಯಾಳು, ಸಂಸ್ಥೆ, ಕಟ್ಟಡ, ಭೂಮಿ, ಕಾಡು, ಮೊದಲಾದವುಗಳ) ಪಾಲಕ; ಕಾವಲುಗಾರ; ರಕ್ಷಕ; ಉಸ್ತುವಾರಿ ವಹಿಸುವವನು; ನೋಡಿಕೊಳ್ಳುವವನು.
  4. = gamekeeper.
  5. (ಭೋಜನಶಾಲೆ, ಉಗ್ರಾಣ, ಅಂಗಡಿ, ಮೊದಲಾದವನ್ನು) ಇಟ್ಟಿರುವವನು; ನಡೆಸುವವನು; ಮಾಲೀಕ ಯಾ ವ್ಯವಸ್ಥಾಪಕ.
  6. ಜೇನು ಸಾಕಣೆಕಾರ; ಜೇನುಹುಳುಗಳನ್ನು ಸಾಕುವವನು.
  7. = wicket-keeper.
  8. = goalkeeper.
  9. (ಗ್ರಂಥಾಲಯ, ವಾಚನಾಲಯ, ವಸ್ತು ಸಂಗ್ರಹಾಲಯ, ಚಿತ್ರಶಾಲೆ, ಮೊದಲಾದವುಗಳ) ಪಾಲಕ; ವ್ಯವಸ್ಥಾಪಕ; ನಿರ್ವಾಹಕ.
  10. ಒತ್ತುಂಗುರ; ತಡೆಯುಂಗುರ; ಕಾಪುಂಗುರ; ಒಂದು ಉಂಗುರವನ್ನು ಭದ್ರಪಡಿಸಲು ತೊಡುವ ಯಾ ತೊಡಿಸುವ ಮತ್ತೊಂದು ಉಂಗುರ, ಮುಖ್ಯವಾಗಿ ಮದುವೆ ಉಂಗುರ.
  11. (ಪ್ರಾಚೀನ ಪ್ರಯೋಗ) ಹುಚ್ಚನನ್ನು ನೋಡಿಕೊಳ್ಳುವವನು.
  12. (ಕಿವಿ ಚುಚ್ಚಿದ ರಂಧ್ರವು ಮುಚ್ಚಿಕೊಳ್ಳದಂತೆ ಇಡುವ) ಕಿವಿಯುಂಗುರ.
  13. ಕೆಟ್ಟುಹೋಗದ, ಕೊಳೆತು ಹೋಗದ ಹಣ್ಣು ಮೊದಲಾದವು.
  14. (ಭೌತವಿಜ್ಞಾನ) ಆಯಸ್ಕಾಂತ ರಕ್ಷಕ; ಶಾಶ್ವತ ಆಯಸ್ಕಾಂತದ ಮೇಲೆ ಇಟ್ಟಿರುವ ಮೆದುಕಬ್ಬಿಣದ ಯಾ ಉಕ್ಕಿನ ತುಂಡು.