kaput ಕ್ಯಾಪುಟ್‍
ಗುಣವಾಚಕ

(ಅಶಿಷ್ಟ) ( ಆಖ್ಯಾತಕ ಪ್ರಯೋಗದಲ್ಲಿ ಮಾತ್ರ)

  1. ಧ್ವಂಸವಾಗಿ ಹೋದ; ಹಾಳಾದ; ಭಸ್ಮವಾಗಿ ಹೋದ; ನಾಶವಾದ; ನಿಶ್ಶೇಷವಾದ; ಧೂಳೀಪಟವಾದ: after the bombardment the city was kaput ಬಾಂಬುದಾಳಿಯ ಬಳಿಕ ನಗರವೆಲ್ಲ ಧ್ವಂಸವಾಗಿ ಹೋಗಿತ್ತು.
  2. ಕೆಲಸಕ್ಕೆ ಬಾರದಂತಾದ; ಕೆಟ್ಟುಹೋದ; ನಿರುಪಯುಕ್ತವಾದ; ಅಸಮರ್ಥವಾಗಿ ಹೋದ: with their cameras rendered kaput ಕೆಲಸಕ್ಕೆ ಬಾರದಂತಾಗಿದ್ದ ತಮ್ಮ ಕ್ಯಾಮರಾಗಳೊಡನೆ.
  3. ಬಳಕೆ ತಪ್ಪಿದ; ಹಿಂದೆ ಬಿದ್ದುಹೋದ; ಗತ: their fashions completely kaput ತೀರ ಹಿಂದೆ ಬಿದ್ದುಹೋದ ಅವರ ಹ್ಯಾಷನ್ನುಗಳು.