kaleidoscope ಕಲೈಡಸ್ಕೋಪ್‍
ನಾಮವಾಚಕ
  1. ಕಲೈಡೋಸ್ಕೋಪು; ವಿವಿಧ ಚಿತ್ರದರ್ಶಕ; ವಿವಿಧ ಚಿತ್ರದರ್ಶಿ; ಕೊಳವೆಯ ಒಳಗಡೆಗೆ ತಗುಲಿದಂತೆ ಪರಸ್ಪರ $50^\circ$ ಕೋನಗಳಿರುವಂತೆ ಮೂರು ಉದ್ದದ ಕನ್ನಡಿಗಳನ್ನು ಜೋಡಿಸಿ, ಕೊಳವಿಯನ್ನು ತಿರುಗಿಸಿದಾಗ ತಳದಲ್ಲಿ ಹಾಕಿರುವ ಬಣ್ಣಬಣ್ಣದ ಗಾಜಿನ ಚೂರುಗಳು, ಮಣಿಗಳು, ಮೊದಲಾದವನ್ನು ವಿವಿಧ ವಿಚಿತ್ರ ಹಾಗೂ ಸುಂದರ ಆಕಾರಗಳಲ್ಲಿ ತೋರಿಸುವ ಸಲಕರಣೆ.
  2. (ರೂಪಕವಾಗಿ) ಚಿತ್ರ ವಿಚಿತ್ರ ಘಟನಾವಲಿ; ನಿರಂತರವಾಗಿ ಬದಲಾಯಿಸುತ್ತಿರುವ ಚಿತ್ರವಿಚಿತ್ರ ವಸ್ತುಗಳು ಯಾ ಘಟನಾವಳಿ; ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಘಟನೆಗಳ ಪರಂಪರೆ.