justify ಜಸ್ಟಿಹೈ
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿ, ಕ್ರಿಯೆ, ಮೊದಲಾದವುಗಳ) ನ್ಯಾಯತ್ವವನ್ನು, ಸಾಧುತ್ವವನ್ನು – ತೋರಿಸು, ಸಾಧಿಸು.
  2. (ಹೇಳಿಕೆ, ಹಕ್ಕು, ಮೊದಲಾದವನ್ನು) ಸಮರ್ಥಿಸು; ಸಾಧಿಸು; ರುಜುವಾತುಗೊಳಿಸು; ನ್ಯಾಯವೆಂದು, ಸರಿಯೆಂದು ತೋರಿಸು.
  3. (ನಡೆವಳಿಕೆ, ಹಕ್ಕು, ಮೊದಲಾದವಕ್ಕೆ) ಸಮರ್ಪಕ ಕಾರಣಗಳನ್ನು ಕೊಡು; ಸರಿಯಾದ ಆಧಾರಗಳನ್ನು ನೀಡು; ರುಜುವಾತು ಒದಗಿಸು.
  4. (ಮುಖ್ಯವಾಗಿ ಕರ್ಮಣಿಪ್ರಯೋಗದಲ್ಲಿ) (ಪರಿಸ್ಥಿತಿಗಳ ವಿಷಯದಲ್ಲಿ) ಸಮರ್ಥಕವಾಗಿರು; ಸಮರ್ಥಿಸುವಂತಿರು; ಸಾಧಕವಾಗಿರು.
  5. (ಭೂತಕೃದಂತದಲ್ಲಿ) ನ್ಯಾಯವಾಗಿರು; ಸಾಧುವಾಗಿರು; ಸರಿಯಾಗಿರು; ಸಮರ್ಥನೀಯವಾಗಿರು: I am justified in assuming ಹೀಗೆಂದು ಊಹಿಸುವುದರಲ್ಲಿ ನ್ಯಾಯವಾಗಿದ್ದೇನೆ.
  6. (ದೇವತಾಶಾಸ್ತ್ರ) (ಏಸುಕ್ರಿಸ್ತನು ಧರ್ಮಸ್ವರೂಪಿಯಾಗಿರುವುದರ ಆಧಾರದ ಮೇಲೆ ಅಥವಾ ರೋಮನ್‍ ಕ್ಯಾಥೊಲಿಕ್‍ರ ಪ್ರಕಾರ ದೈವಕೃಪೆಯ ಫಲವಾಗಿ, ಒಬ್ಬನಿಗೆ) ಪಾಪವಿಮೋಚನೆ ಘೋಷಿಸು; ಪಾಪದ ಶಿಕ್ಷೆಯಿಂದ ವಿಮೋಚನೆ ದೊರೆತಿದೆ ಎಂದು ಘೋಷಿಸು.
  7. (ಮುದ್ರಣ) ಸಾಲು – ಹೊಂದಿಸು, ಸರಿಹೊಂದಿಸು; ಅಚ್ಚು ಮೊಳೆಗಳ ಸಾಲು ಸರಿಯಾಗಿರುವಂತೆ, ಖಾಲಿ ಸ್ಥಳವನ್ನು ಅಂದವಾಗಿ ತುಂಬುವಂತೆ, ಅಚ್ಚು ಪಂಕ್ತಿ ಸಾಲನ್ನು ಜೋಡಿಸು.
ಪದಗುಚ್ಛ

justify bail (ಒಬ್ಬನು ಒದಗಿಸುವ) ಜಾಮೀನನ್ನು ಸಮರ್ಥಿಸು; ಜಾಮೀನಾಗಲು ಜಾಮೀನುದಾರನಿಗೆ ಅರ್ಹತೆ ಇದೆ ಎಂದು, ಸಾಕಷ್ಟು ಹಣವಿದೆ ಎಂದು, ಅವನಿಂದ ಪ್ರಮಾಣ ಮಾಡಿಸಿ ತೋರಿಸು.