jury ಜುಅರಿ
ನಾಮವಾಚಕ
  1. ಜೂರಿ; ನ್ಯಾಯದರ್ಶಿ ಮಂಡಲಿ; ನ್ಯಾಯಸ್ಥಾನದಲ್ಲಿ ತಮಗೆ ಒಪ್ಪಿಸಿದ ವಿಷದಲ್ಲಿ ನ್ಯಾಯವಾದ ಅಥವಾ ನಿಜವಾದ ತೀರ್ಪುನ್ನು ಕೊಡುವುದಾಗಿ ಪ್ರತಿಜ್ಞೆ ಮಾಡುವ ಸದಸ್ಯರನ್ನೊಳಗೊಂಡ ಮಂಡಲಿ.
  2. (ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದವರನ್ನು ನಿರ್ಧರಿಸಲು ನಿಯುಕ್ತವಾದ) ತೀರ್ಪುಗಾರರ, ನಿರ್ಣಯಕಾರರ – ಮಂಡಲಿ.
ಪದಗುಚ್ಛ
  1. common jury ಸಾಮಾನ್ಯ ನ್ಯಾಯದರ್ಶಿ ಮಂಡಲಿ; ಸಾಧಾರಣಾ ವರ್ಗದ ವ್ಯಕ್ತಿಗಳು ಸದಸ್ಯರಾಗಿರುವ ನ್ಯಾಯದರ್ಶಿ ಮಂಡಲಿ.
  2. grand jury (ಚರಿತ್ರೆ ಅಥವಾ ಅಮೆರಿಕನ್‍ ಪ್ರಯೋಗ) ಮಹಾ ನ್ಯಾಯದರ್ಶಿ ಮಂಡಲಿ; ವಿಚಾರಣೆಗೆ ಮುನ್ನ, ಆಪಾದನೆಯ ಸಿಂಧುತ್ವವನ್ನು ಪರೀಕ್ಷಿಸಲು ನೇಮಿಸಿದ ವ್ಯಕ್ತಿಗಳ ಮಂಡಲಿ.
  3. jury of matrons (ಚರಿತ್ರೆ) (ತೀರ್ಪನ್ನು ತಡೆಗಟ್ಟಲು ಗರ್ಭಿಣಿ ಎಂಬ ವಾದ ಹೂಡಿದಾಗ ಸತ್ಯಾಸತ್ಯತೆಗಳನ್ನು ನಿರ್ಣಯಿಸಲು ನೇಮಕವಾದ, ವಿವೇಕಿಗಳಾದ) ಸ್ತ್ರೀ(ಯರ) ನ್ಯಾಯದರ್ಶಿ ಮಂಡಲಿ.
  4. special jury (ಸಮಾಜದಲ್ಲಿ ನಿರ್ದಿಷ್ಟ ಅಂತಸ್ತಿನ ಸದಸ್ಯರನ್ನೊಳಗೊಂಡ) ವಿಶೇಷ ನ್ಯಾಯದರ್ಶಿ ಮಂಡಲಿ.
  5. trial jury (ಸಿವಿಲ್‍ ಅಥವಾ ಕ್ರಿಮಿನಲ್‍ ಮೊಕದ್ದಮೆಗಳಲ್ಲಿ ಸತ್ಯಾಂಶವನ್ನು ವಿಚಾರಿಸಿ ಅಂತಿಮ ತೀರ್ಪನ್ನು ಕೊಡಲು ನೇಮಕವಾದ 12 ಮಂದಿ ಸದಸ್ಯರ) ವಿಚಾರಣಾ ನ್ಯಾಯದರ್ಶಿ ಮಂಡಲಿ.