jumping ಜಂಪಿಂಗ್‍
ಗುಣವಾಚಕ
  1. ನೆಗೆಯುವ; ಹಾರುವ; ಎಗರುವ; ಜಿಗಿಯುವ; ಚಿಮ್ಮುವ; ಲಂಘಿಸುವ.
  2. ಹಾರಿ ದಾಟುವ.
  3. (ಸಂತೋಷ ಮೊದಲಾದವುಗಳಿಂದ) ನೆಗೆದಾಡುವ; ಕುಣಿಯುವ.
  4. (ಬೆಲೆ ಮೊದಲಾದವು ಇದ್ದಕ್ಕಿದ್ದಂತೆ) ಏರಿ ಬಿಡುವ; ತೇಜಿಯಾಗುವ.
  5. (ವಾದ ಮೊದಲಾದವುಗಳಲ್ಲಿ) ಆತುರದ ತೀರ್ಮಾನಕ್ಕೆ – ನೆಗೆಯುವ, ಧುಮುಕುವ, ಹಾರಿಬಿಡುವ.
  6. (ಗಿರಾಕಿಯು ಕೊಡಲೊಪ್ಪಿದ ಬೆಲೆಯನ್ನು ಅಥವಾ ಒಪ್ಪಿಗೆ ಹಂತ ಮುಟ್ಟಿದ ವ್ಯಾಪಾರವನ್ನು) ಆತುರದಿಂದ ಒಪ್ಪಿಕೊಳ್ಳುವ.
  7. (ತಪ್ಪಿತಸ್ಥ ಮೊದಲಾದವರ ಮೇಲೆ ಬಿದ್ದು, ಅವರ ಹುಟ್ಟಡಗಿಸುವಂತೆ) ಹಾರಿ ಬೀಳುವ; ಎರಗಿ ಬೀಳುವ.
  8. (ಒಂದರೊಡನೊಂದು) ಹೊಂದಿಕೊಳ್ಳುವ; ಮೇಳಯಿಸುವ.
  9. (ಹೆಬ್ಬಾಗಿಲು ಮೊದಲಾದವನ್ನು) ಹಾರುವ, ಹಾರಿ ದಾಟುವ.
  10. (ರೈಲ್ವೆ ಬಂಡಿಯ ವಿಷಯದಲ್ಲಿ) ಕಂಬಿ, ಹಳಿ – ತಪ್ಪುವ.
  11. (ಮಗು ಮೊದಲಾದವನ್ನು) ನೆಗೆಸುವ ಅಥವಾ ಧುಮುಕಿಸುವ.
  12. (ವಸ್ತುವನ್ನು) ಹಾರಿಸುವ; ನೆಗೆಸುವ; ಚಿಮ್ಮಿಸುವ; ಜಿಗಿಸುವ.
  13. (ವ್ಯಕ್ತಿಯನ್ನು) ಬೆಚ್ಚಿ ಬೀಳಿಸುವ; ಹೌಹಾರಿಸುವ.
  14. (ಆಲೂಗೆಡ್ಡೆ ಮೊದಲಾದವನ್ನು) ಬಾಣಲೆಯಲ್ಲಿ ಆಗಾಗ ಕೆದಕುತ್ತ ಕರಿಯುವ.
  15. (ಇತರರನ್ನು, ಅವರಿಗೆ ತಿಳಿಯದಂತೆಯೇ) ಅತಿಕ್ರಮಿಸುವ.
  16. (ಹಿಂದಿನ ಅನುಭವದಾರನು ತೊರೆದನೆಂಬ ಅಥವಾ ಕಾಯಿದೆಯಂತೆ ಕಳೆದುಕೊಂಡನೆಂಬ ನೆವದಿಂದ, ಒಂದು ಹಕ್ಕನ್ನು, ಕಾಯಿದೆ ಕ್ರಮಕ್ಕೆ ಕಾಯದೆ) ಸರಕ್ಕನೆ ಕಸಿದುಕೊಳ್ಳುವ.
  17. (ವಿಷಯವನ್ನು ಅಥವಾ ಪುಸ್ತಕದ ಭಾಗವನ್ನು, ಕಣ್ಣು ಹಾಯಿಸುತ್ತಾ) ಹಾರಿಸಿಬಿಡುವ.