juice ಜೂಸ್‍
ನಾಮವಾಚಕ
  1. (ತರಕಾರಿ ಅಥವಾ ಹಣ್ಣುಗಳ) ರಸ.
  2. (ಬಹುವಚನದಲ್ಲಿ) ದೇಹಧಾತುಗಳು; ಶಾರೀರಿಕ ಧಾತುಗಳು; ಶರೀರದ ರಸಧಾತುಗಳು; ಮನುಷ್ಯನ ಭೌತ ಮತ್ತು ಮಾನಸಿಕ ಗುಣಗಳನ್ನು ನಿರ್ಧರಿಸುವುದೆಂದು ನಂಬಲಾಗಿದ್ದ ರಕ್ತ, ಶ್ಲೇಷ್ಮ, ಹರಿತಪಿತ್ತ ಮತ್ತು ಕೃಷ್ಣಪಿತ್ತಗಳೆಂಬ ನಾಲ್ಕು ಧಾತುಗಳು.
  3. (ಪ್ರಾಣಿಯ ದೇಹದ ಅಥವಾ ವಸ್ತುವಿನ) ರಸ(ಭಾಗ): gastric juice ಜಠರ ರಸ. pancreatic juice ಮೇದೋಜೀರಕ ರಸ.
  4. (ಯಾವುದರದೇ) ಸಾರ; ಜೀವಾಳ; ರಸ; ಅಂತಸ್ಸತ್ತ್ವ.
  5. (ಅಶಿಷ್ಟ) (ಎಂಜಿನ್‍, ವಿದ್ಯುತ್‍ ತಂತಿ, ಮೊದಲಾದವುಗಳಲ್ಲಿ ಬಳಸುವ) ಪೆಟ್ರೋಲ್‍ ಅಥವಾ ವಿದ್ಯುತ್ತು.