See also 2join
1join ಜಾಇನ್‍
ಸಕರ್ಮಕ ಕ್ರಿಯಾಪದ
  1. (ವಸ್ತುಗಳನ್ನು ಒಂದನ್ನೊಂದಕ್ಕೆ, ಒಟ್ಟಿಗೆ) ಕೂಡಿಸು; ಸೇರಿಸು; ಜಂಟಿಹಾಕು; ಸಂಯೋಜಿಸು; ಜೋಡಿಸು; ಬಂಧಿಸು.
  2. (ಎರಡು ಬಿಂದುಗಳನ್ನು) (ಮುಖ್ಯವಾಗಿ ಸರಳ) ರೇಖೆಯಿಂದ – ಸೇರಿಸು, ಕೂಡಿಸು.
  3. (ವ್ಯಕ್ತಿಗಳನ್ನು ಮದುವೆ, ಸ್ನೇಹ, ಬಾಂಧವ್ಯ, ಮೊದಲಾದವುಗಳ ಮೂಲಕ) ಒಂದಾಗಿಸು; ಒಟ್ಟುಗೂಡಿಸು; ಒಂದುಗೂಡಿಸು; (ವ್ಯಕ್ತಿಗಳಲ್ಲಿ ಪರಸ್ಪರ) ಸಂಬಂಧ ಉಂಟುಮಾಡು.
  4. (ಒಬ್ಬ ವ್ಯಕ್ತಿಯ) ಒಡನಾಡಿಯಾಗು; ಜೊತೆ ಸೇರು; ಜೊತೆಗೂಡು; ಸಹವಾಸ ಸೇರು.
  5. (ಕೆಲಸ, ಭೋಜನ, ಮೊದಲಾದವುಗಳಲ್ಲಿ ವ್ಯಕ್ತಿಯ) ಜೊತೆಗೆ ಸೇರು; ಒಡನೆ ಭಾಗಿಯಾಗು.
  6. (ಸಂಘ, ಸೈನ್ಯ, ಮೊದಲಾದವುಗಳ) ಸದಸ್ಯನಾಗು; ಸದಸ್ಯನಾಗಿ ಸೇರು.
  7. (ಸೈನ್ಯಪಡೆ, ಹಡಗು, ವಾಣಿಜ್ಯ ಸಂಸ್ಥೆ, ಮೊದಲಾದವುಗಳಲ್ಲಿ) ತನ್ನ ಸ್ಥಾನಕ್ಕೆ, ಹುದ್ದೆಗೆ, ಸೇರಿಕೊ ಅಥವಾ ತನ್ನ ಸ್ಥಾನವನ್ನು ಪುನರ್ವಹಿಸಿಕೊ.
  8. ಕೂಡು; ಸೇರಿಕೊ; ಸಂಗಮವಾಗು; ಸಂಗಮಿಸು: the Kapila joins the Kaveri at Tirumakudala Narasipur ತಿರುಮಕೂಡಲು ನರಸೀಪುರದಲ್ಲಿ ಕಪಿಲಾ ನದಿಯು ಕಾವೇರಿಯನ್ನು ಸೇರಿಕೊಳ್ಳುತ್ತದೆ. ಕಪಿಲಾ ನದಿಯು ಕಾವೇರಿಯೊಡನೆ ಸಂಗಮಿಸುತ್ತದೆ.
ಅಕರ್ಮಕ ಕ್ರಿಯಾಪದ
  1. ಒಂದುಗೂಡು; ಒಂದಾಗು; ಒಟ್ಟುಗೂಡು; ಏಕೀಭವಿಸು.
  2. (ಮಾಡುವುದರಲ್ಲಿ ಅಥವಾ ಕಾರ್ಯದಲ್ಲಿ) ಇತರರೊಡನೆ – ಸೇರಿಕೊ, ಭಾಗವಹಿಸು, ಭಾಗಿಯಾಗು, ಪಾಲ್ಗೊಳ್ಳು.
ಪದಗುಚ್ಛ
  1. join battle ಹೋರಾಡತೊಡಗು; ಕದನ, ಕಾಳಗ ಮಾಡಲು ಪ್ರಾರಂಭಿಸು.
  2. join hands
    1. (ತನ್ನ) ಕೈಜೋಡಿಸು.
    2. ಪರಸ್ಪರ ಕೈ ಕೈ ಜೋಡಿಸು.
    3. (ರೂಪಕವಾಗಿ) (ಒಂದು ಕಾರ್ಯದಲ್ಲಿ ಅಥವಾ ಉದ್ಯಮದಲ್ಲಿ) ಒಂದುಗೂಡು; ಒಂದಾಗು; ಒಟ್ಟಾಗಿ ಸೇರು; ಸಂಯೋಗ ಹೊಂದು.
  3. join in ಭಾಗವಹಿಸು; ಪಾಲ್ಗೊಳ್ಳು; ಭಾಗಿಯಾಗು.
  4. join up (ಸೈನ್ಯ ಮೊದಲಾದವುಗಳಿಗೆ) ಸೇರಿಕೊ; ದಾಖಲಾಗು.
  5. join $^1$issue.
    1. (ವಿವಾದಾಂಶವೆಂದು ಒಪ್ಪಿದ ವಿಷಯದ ಮೇಲೆ, ಇನ್ನೊಬ್ಬರೊಡನೆ) ವಾದಕ್ಕೆ – ಇಳಿ, ತೊಡಗು, ಆರಂಭಿಸು: we shall be ready to join issue with them on this very point ನಾವು ಅವರೊಡನೆ ಈ ಅಂಶದ ಮೇಲೆಯೇ ವಾದ ಮಾಡಲು ಸಿದ್ಧ.
    2. (ನ್ಯಾಯಶಾಸ್ತ್ರ) ವಿವಾದಾಂಶವನ್ನು ತೀರ್ಪಿಗೆ ಒಟ್ಟಾಗಿ ಒಪ್ಪಿಸು.
    3. (ನ್ಯಾಯಶಾಸ್ತ್ರ) (ಒಂದು ಪಕ್ಷ) ಮತ್ತೊಂದು ಪಕ್ಷ ಒಪ್ಪಿಸಿದ ವಾದಾಂಶವನ್ನು ಅಂಗೀಕರಿಸು.
See also 1join
2join ಜಾಇನ್‍
ನಾಮವಾಚಕ
  1. ಸಂಯೋಗ, ಸಂಗಮ – ಬಿಂದು; ಕೂಡುವ ಬಿಂದು.
  2. ಸಂಯೋಗ, ಸಂಗಮ – ರೇಖೆ; ಕೂಡುವ ಗೆರೆ.
  3. ಸಂಯೋಗ, ಸಂಗಮ – ಸ್ತರ; ಕೂಡುವ ತಲ.