See also 2jig
1jig ಜಿಗ್‍
ನಾಮವಾಚಕ
  1. ಜಿಗ್‍ – ನೃತ್ಯ, ಕುಣಿತ; ಒಂದು ಬಗೆಯ ಗೆಲುವಿನ, ಲವಲವಿಕೆಯ, ಚುರುಕಾದ ನೃತ್ಯ.
  2. ಜಿಗ್‍ (ಸಂಗೀತ): ಜಿಗ್‍ ನೃತ್ಯಕ್ಕೆ ಹೊಂದಿಸಿದ, ಸಾಮಾನ್ಯವಾಗಿ 3–4 ಅಥವಾ 6–8 ತಾಳದ ಸಂಗೀತ.
  3. ಜಿಗ್ಗು: ಯಾವುದೇ ವಸ್ತುವಿನ ಮೇಲೆ ಉಪಕರಣಗಳನ್ನೂ ಯಂತ್ರಸಾಧನಗಳನ್ನೂ ಪ್ರಯೋಗಿಸುವಾಗ, ಅದನ್ನು ಒಂದು ಸ್ಥಳದಲ್ಲಿ ಭದ್ರವಾಗಿ ಹಿಡಿದಿಡಲು ಬಳಸುವ ಸಾಧನ; ಹತ್ಯಾರನ್ನು ಗೊತ್ತಾದ ತಾವಿನಲ್ಲಿ ಕಚ್ಚಿ ಹಿಡಿದುಕೊಳ್ಳುವ ಸಾಧನ.
  4. (ಅಶಿಷ್ಟ) ಹಾಸ್ಯ; ಕುಚೇಷ್ಟೆ.
ನುಡಿಗಟ್ಟು

the jig is up ಜಯದ ಕಾಲ ಮುಗಿದು ಹೋಯಿತು; ಇನ್ನು ಮುಂದೆ ಗೆಲ್ಲುವುದು ಅಸಾಧ್ಯ.

See also 1jig
2jig ಜಿಗ್‍
ಕ್ರಿಯಾಪದ
(ವರ್ತಮಾನ ಕೃದಂತ jigging, ಭೂತರೂಪ ಮತ್ತು ಭೂತಕೃದಂತ jigged).
ಸಕರ್ಮಕ ಕ್ರಿಯಾಪದ
  1. ಮೇಲಕ್ಕೂ ಕೆಳಕ್ಕೂ ಸರಕ್ಕನೆ – ಸರಿಸು, ಆಡಿಸು, ಚಾಲನಗೊಳಿಸು.
  2. ಸೋಸು; ಜಾಲಿಸು; ರಂಧ್ರಗಳನ್ನು ಮಾಡಿದ ತಳವುಳ್ಳ ಪೆಟ್ಟಿಗೆಯಲ್ಲಿ ಅದುರಿನ ಪುಡಿಯನ್ನು ಹಾಕಿ ನೀರಿನಲ್ಲಿ ಜಾಲಿಸಿ ಅದರ ಒರಟಾದ ಮತ್ತು ನಯವಾದ ಅಂಶಗಳನ್ನು ಬೇರ್ಪಡಿಸು.
  3. (ಕೆಲಸ ನಡೆಯುತ್ತಿರುವ ವಸ್ತುಗಳಿಗೆ) ಜಿಗ್‍ಗಳನ್ನು – ಜೋಡಿಸು, ಅಳವಡಿಸು, ಸಜ್ಜುಗೊಳಿಸು.
ಅಕರ್ಮಕ ಕ್ರಿಯಾಪದ
  1. ಮೇಲಕ್ಕೂ ಕೆಳಕ್ಕೂ ಸರಕ್ಕನೆ – ಸರಿ, ಆಡು, ಚಲಿಸು.
  2. ಜಿಗ್‍ ಕುಣಿತ ಕುಣಿ.
ನುಡಿಗಟ್ಟು

jig about ಚಡಪಡಿಸು.