jersey ಜರ್ಸಿ
ನಾಮವಾಚಕ
(ಬಹುವಚನ jerseys).
  1. ಜರ್ಸಿ (ದ್ವೀಪ); ಇಂಗ್ಲಿಷ್‍ ಕಡಲ್ಗಾಲುವೆಯಲ್ಲಿರುವ ಚಾನಲ್‍ ಐಲಂಡ್ಸ್‍ ದ್ವೀಪಸ್ತೋಮದ ದ್ವೀಪಗಳಲ್ಲೊಂದು.
  2. (Jersey) ಜರ್ಸಿ (ದ್ವೀಪದ) ಹಸು.
  3. ಜರ್ಸಿ:
    1. (ಮುಖ್ಯವಾಗಿ ವ್ಯಾಯಾಮ ಶಾಲೆಗಳಲ್ಲಿ ಹಾಕಿಕೊಳ್ಳುವಂಥ) ಉಣ್ಣೆಯ ದಾರದಿಂದ ಹೆಣೆದ, ತಲೆಯ ಮೇಲಿಂದ ಎಳೆದು ಬಿಚ್ಚಬಹುದಾದ, ಬಿಗಿ ಕವಚ.
    2. ಉಣ್ಣೆಯ ದಾರದಿಂದ ಹೆಣೆದ ಒಳಗವಚ, ಒಳ ಜಾಕೀಟು.
    3. ಹೆಣೆಗೆಯಿಂದ ಮಾಡಿದ, ಹೆಂಗಸಿನ – ಬಿಗಿಗವಚ, ನಡುವಂಗಿ, ಜಾಕೀಟು.