jenny ಜೆನಿ
ನಾಮವಾಚಕ
(ಬಹುವಚನ jennies).
  1. ಜೆನ್ನಿ; ಚಲ ಕ್ೇನು; ಚಲಿಯೆತ್ತುಗ; (ಸ್ಥಳದಿಂದ ಸ್ಥಳಕ್ಕೆ) ಚಲಿಸಬಲ್ಲ ಕ್ರೇನು.
  2. ಬಹುಕದಿರು ರಾಟೆ; ಒಟ್ಟಿಗೆ ಅನೇಕ ಎಳೆಗಳನ್ನು ನೂಲುವ ಯಂತ್ರ ಸಲಕರಣೆ; ಹಲವು ಕದಿರುಗಳುಳ್ಳ ರಾಟೆ.
  3. ಬಿಲಿಯರ್ಡ್ಸ್‍ ಆಟದಲ್ಲಿನ ಒಂದು ಹೊಡೆತ.
  4. = creeping Jenny.
  5. ಹೆಂಗತ್ತೆ; ಹೆಣ್ಣು ಕತ್ತೆ; ಗಾರ್ದಭಿ.
ಪದಗುಚ್ಛ
  1. long jenny ಲಾಂಗ್‍ ಜೆನ್ನಿ; ಇಂಗ್ಲಿಷ್‍ ಬಿಲಿಯರ್ಡ್ಸ್‍ ಆಟದಲ್ಲಿ ಮೇಜಿನ ದೂರದ ತುದಿಯಿಂದ ಮೂಲೆಯ ಚೀಲಕ್ಕೆ ಹೊಡೆಯುವ,ಪಾಯಿಂಟ್‍ ಕಳೆದುಕೊಳ್ಳುವ, ಹೊಡೆತ.
  2. short jenny ಷಾರ್ಟ್‍ ಜೆನ್ನಿ; ಇಂಗ್ಲಿಷ್‍ ಬಿಲಿಯರ್ಡ್ಸ್‍ ಆಟದಲ್ಲಿ ನಡುವಣ ಚೀಲಕ್ಕೆ ಹೊಡೆದು ಪಾಯಿಂಟ್‍ ಕಳೆದುಕೊಳ್ಳುವ ಹೊಡೆತ.