jejune ಜಿಜೂನ್‍
ಗುಣವಾಚಕ
  1. ತೀರ ಅಲ್ಪ; ಬಹಳ ಕಡಿಮೆ ಆದ; ತೀರ ಸಾಲದ.
  2. ನಿಸ್ಸಾರವಾದ.
  3. (ಭೂಮಿಯು ವಿಷಯದಲ್ಲಿ) ಬರಡಾದ; ಫಲವತ್ತಲ್ಲದ; ಬಂಜರಾದ.
  4. ನೀರಸ; ಶುಷ್ಕ; ಅತೃಪ್ತಿಕರ; ಅಸಮರ್ಪಕ; ಸ್ವಾರಸ್ಯವಿಲ್ಲದ: a jejune novel ನೀರಸವಾದ ಕಾದಂಬರಿ.
  5. ಅನುಭವವಿಲ್ಲದ; ತಿಳಿವಳಿಕೆ ಸಾಲದ; ನುರಿತಿಲ್ಲದ; ಅನಭಿಜ್ಞ; ಅಕುಶಲ: jejune attempts to design ಯೋಜಿಸುವುದರಲ್ಲಿ ಅಕುಶಲ ಪ್ರಯತ್ನಗಳು.
  6. ಬಾಲಿಶ; ಅಪಕ್ವ; ಎಳಸು: jejune behaviour towards others ಇತರರ ವಿಷಯದಲ್ಲಿ ಬಾಲಿಶ ನಡೆವಳಿಕೆ.