ivory ಐವರಿ
ನಾಮವಾಚಕ
(ಬಹುವಚನ ivories).
  1. (ಆನೆ, ನೀರಾನೆ, ವಾಲ್‍ರಸ್‍, ಮೊದಲಾದ ಪ್ರಾಣಿಗಳ ಕೋರೆಹಲ್ಲುಗಳ ಭಾಗವಾದ) ದಂತ: fossil ivory (‘ಮ್ಯಾಮತ್‍’ ಎಂಬ ವಂಶನಷ್ಟ ಗಜದ) ಪಳೆಯುಳಿಕೆ ದಂತ; ಅವಶಿಷ್ಟ ದಂತ; ಹಾಸಿಲ್‍ದಂತ.
  2. ದಂತವರ್ಣ; ದಂತದ ಬಣ್ಣ.
  3. (ಸಾಮಾನ್ಯವಾಗಿ ಬಹುವಚನದಲ್ಲಿ)
    1. ದಂತದ ವಸ್ತುಗಳು; ದಂತದಿಂದ ಮಾಡಿದ ಪದಾರ್ಥಗಳು.
    2. (ಅಶಿಷ್ಟ) ದಾಳಗಳು.
    3. (ಅಶಿಷ್ಟ) ಬಿಲ್ಯರ್ಡ್ಸ್‍ ಆಟದ ಚೆಂಡುಗಳು.
    4. (ಅಶಿಷ್ಟ) ಪಿಯಾನೋ (ವಾದ್ಯದ) ಕೀಲುಗಳು, ಬಿರಡೆಗಳು.
  4. (ಅಶಿಷ್ಟ, ಏಕವಚನ ಯಾ ಬಹುವಚನ) ಹಲ್ಲುಗಳು.
ಪದಗುಚ್ಛ

vegetable ivory ಸಸ್ಯದಂತ; ವೃಕ್ಷದಂತ; ಮರದಂತ; ದಕ್ಷಿಣ ಅಮೆರಿಕದ ಕೊರೊಜೊ ತಾಳೆ ಮರದ ಬೀಜದೊಳಗಿನ ಗಟ್ಟಿಯಾದ ಸಸಾರಜನಕ ಪದಾರ್ಥ.