issueless ಇಷೂ(ಸ್ಯೂ)ಲಿಸ್‍
ಗುಣವಾಚಕ
  1. ಸಂತಾನರಹಿತ; ಮಕ್ಕಳಿಲ್ಲದ; ಅನಪತ್ಯ: died issueless ಮಕ್ಕಳಿಲ್ಲದೆ ಸತ್ತ.
  2. ನಿಷ್ಫಲ; ಪರಿಣಾಮವಿಲ್ಲದ; ಫಲಿತಾಂಶರಹಿತ; ನಿಷ್ಪರಿಣಾಮದ; ಫಲವಿಲ್ಲದ: an issueless effort ಪರಿಣಾಮವಿಲ್ಲದ ಪ್ರಯತ್ನ.
  3. ವಿವಾದಾಸ್ಪದವಲ್ಲದ; ವಿವಾದ ಯಾ ಚರ್ಚೆಗೆ ಎಡೆಕೊಡದ: an issueless piece of writing ವಿವಾದಾಸ್ಪದವಲ್ಲದ ಬರವಣಿಗೆ.