isolation ಐಸಲೇಷನ್‍
ನಾಮವಾಚಕ
  1. ಬೇರ್ಪಾಟು; ಬೇರ್ಪಡಿಸುವಿಕೆ; ಪ್ರತ್ಯೇಕಿಸುವಿಕೆ; ಪ್ರತ್ಯೇಕೀಕರಣ.
  2. ಬೇರ್ಪಟ್ಟ ಸ್ಥಿತಿ; ಪ್ರತ್ಯೇಕಿಸಿದ ಸ್ಥಿತಿ.
  3. ವಿವಿಕ್ತತೆ; ಪ್ರತ್ಯೇಕತೆ; ಸಂಬಂಧ, ಸಂಪರ್ಕ ಕಡಿದ ಸ್ಥಿತಿ.
  4. ಒಂಟಿತನ; ಏಕಾಂಗಿತನ.
ಪದಗುಚ್ಛ
  1. in isolation ಪ್ರತ್ಯೇಕವಾಗಿ; ವಿವಿಕ್ತವಾಗಿ; ಪೃಥಕ್ಕಾಗಿ; ಇನ್ನೊಂದರೊಡನೆ ಅಲ್ಲದೆ: examine each piece of evidence in isolation ಪ್ರತಿಯೊಂದು ಸಾಕ್ಷ್ಯವನ್ನೂ ಪ್ರತ್ಯೇಕವಾಗಿ (ಅಂದರೆ ಇತರವನ್ನು ಗಣನೆಗೆ ತೆಗೆದುಕೊಳ್ಳದೆ) ಪರೀಕ್ಷಿಸು.
  2. isolation hospital, ward, etc. ಏಕಾಂತ ಆಸ್ಪತ್ರೆ, ವಾರ್ಡು, ಮೊದಲಾದವು; ಸೋಂಕು ಅಥವಾ ಅಂಟು ರೋಗದ ರೋಗಿಗಳಿಗಾಗಿ ಇರುವ, ಆಸ್ಪತ್ರೆ, ವಾರ್ಡು, ಮೊದಲಾದವು.