isogloss ಐಸೋಗ್ಲಾಸ್‍
ನಾಮವಾಚಕ

ಸಮಾನ ಭಾಷಾರೇಖೆ:

  1. ಒಂದು ವಿಶಿಷ್ಟ ಭಾಷಾ ಲಕ್ಷಣವುಳ್ಳ ಪ್ರದೇಶವನ್ನು ಗುರುತಿಸಿರುವ, ಭೂಪಟದ ಮೇಲಿನ ರೇಖೆ.
  2. (ಉಪಭಾಷೆಯೊಂದರ ಪ್ರಾದೇಶಿಕ ವ್ಯಾಪ್ತಿಯ ಅಧ್ಯಯನದಲ್ಲಿ) ಭಾಷೆಯ ಯಾವುದಾದರೂ ಒಂದು ವಿಶಿಷ್ಟ ಲಕ್ಷಣದಲ್ಲಿ, ಅಂಶದಲ್ಲಿ ಪರಸ್ಪರ ಭಿನ್ನವಾಗಿರುವ ಪ್ರದೇಶಗಳನ್ನು ಬೇರ್ಪಡಿಸಿ ತೋರಿಸಲು ಭೂಪಟದ ಮೇಲೆ ಎಳೆದಿರುವ ಗೆರೆ.