See also 2island
1island ಐಲಂಡ್‍
ನಾಮವಾಚಕ
  1. ದ್ವೀಪ; ದೀವಿ; ನಡುಗಡ್ಡೆ; ಕುರುವ; ಕುದುರು.
  2. (ರೂಪಕವಾಗಿ) ವಿವಿಕ್ತ ಪ್ರದೇಶ; ಪ್ರತ್ಯೇಕಿತ ಪ್ರದೇಶ; ಪ್ರತ್ಯೇಕಿಸಿದಂತಿರುವ ಯಾವುದೇ ವಸ್ತು (ಮುಖ್ಯವಾಗಿ ಹುಲ್ಲು ಮೈದಾನದಿಂದ ಸುತ್ತುವರಿದ ಮರಗಾಡು).
  3. = traffic island.
  4. (ನೌಕಾಯಾನ) ನೌಕೆಯ ಅಧಿರಚನೆ, ನೌಕಾಧಿಪತಿಯು ನಿಲ್ಲುವ ವೇದಿಕೆ, ಮೊದಲಾದವು.
  5. (ಶರೀರ ವಿಜ್ಞಾನ) ಊತಕ ದ್ವೀಪ ಯಾ ಜೀವಕೋಶ ದ್ವೀಪ; ದೇಹದ ಯಾವುದೇ ಭಾಗದಲ್ಲಿ ಬೇರೊಂದು ಬಗೆಯ ಜೀವಕೋಶಗಳಿಂದ ಯಾ ಊತಕದಿಂದ ಆವೃತವಾಗಿರುವ ಜೀವಕೋಶ ಸಮೂಹ ಯಾ ಊತಕ.
See also 1island
2island ಐಲಂಡ್‍
ಸಕರ್ಮಕ ಕ್ರಿಯಾಪದ
  1. ದ್ವೀಪವಾಗಿಸು; ದ್ವೀಪವನ್ನಾಗಿ ಮಾಡು: a stream islanding a white rock ಬಿಳಿಯ ಬಂಡೆಯನ್ನು ದ್ವೀಪದಂತೆ ಮಾಡಿದ ತೊರೆ.
  2. ವಿವಿಕ್ತಗೊಳಿಸು; ಪ್ರತ್ಯೇಕಿಸು; ಬೇರ್ಪಡಿಸು.
  3. ದ್ವೀಪಗಳಂತೆ ಚುಕ್ಕೆಚುಕ್ಕೆಯಾಗಿ ಹರಡು: groups of people islanded upon the grass ಹುಲ್ಲಿನ ಮೇಲೆ ದ್ವೀಪಗಳಂತೆ ಚುಕ್ಕೆಚುಕ್ಕೆಯಾಗಿ ಹರಡಿದ್ದ ಜನರ ಗುಂಪುಗಳು.